-->
ಮಲಪ್ಪುರಂ: ರಸ್ತೆ ಹೊಂಡಗಳ ಮಧ್ಯೆಯೇ ವೆಡ್ಡಿಂಗ್ ಫೋಟೋಶೂಟ್: ನೆಟ್ಟಿಗರಿಂದ ಶಹಬ್ಬಾಸ್ ಎನಿಸಿಕೊಂಡ ವಧು

ಮಲಪ್ಪುರಂ: ರಸ್ತೆ ಹೊಂಡಗಳ ಮಧ್ಯೆಯೇ ವೆಡ್ಡಿಂಗ್ ಫೋಟೋಶೂಟ್: ನೆಟ್ಟಿಗರಿಂದ ಶಹಬ್ಬಾಸ್ ಎನಿಸಿಕೊಂಡ ವಧು

ಮಲಪ್ಪುರಂ: ವಿವಾಹದ ಸಂದರ್ಭದಲ್ಲಿ ಪ್ರೀ ವೆಡ್ಡಿಂಗ್ ಅಥವಾ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ನವ ಜೋಡಿಯ ಅವಿಭಾಜ್ಯ ಅಂಗ. ಬಹುತೇಕರು ತಮ್ಮ ವೆಡ್ಡಿಂಗ್ ಫೋಟೋಗಳು ಬಹಳ ವಿಭಿನ್ನವಾಗಿರಬೇಕೆಂದು ಅಂದು ಕೊಂಡಿರುತ್ತಾರೆ. ಹಾಗಾಗಿ ಬಹಳ ಸುಂದರ ತಾಣಗಳಲ್ಲಿ ಫೋಟೊಶೂಟ್ ಮಾಡಿಕೊಳ್ಳುತ್ತಾರೆ. ಆದರೆ , ಕೇರಳದ ವಧುವೊಬ್ಬರು ತಮ್ಮ ವೆಡ್ಡಿಂಗ್ ಫೋಟೋಶೂಟ್ ಮಾಡುವ ಮೂಲಕ ಸರ್ಕಾರದ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. 

ಹೌದು, ಮಲಪ್ಪುರಂ ಜಿಲ್ಲೆಯ ನೀಲಂಬುರ್ ಪಟ್ಟಣದಲ್ಲಿ ರಸ್ತೆ ಸಂಪೂರ್ಣ ಹೊಂಡಮಯವಾಗಿತ್ತು. ರಸ್ತೆಯ ಈ ಶೋಚನಿಯ ಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕೆಂಬ ಉದ್ದೇಶದಿಂದ ಪೂಕೊಟ್ಟುಂಪದಂ ಮೂಲದ ಸುಜೀಶಾ ಎಂಬವರು ರಸ್ತೆ ಗುಂಡಿಗಳ ನಡುವೆಯೇ ವೆಡ್ಡಿಂಗ ಫೋಟೋಶೂಟ್ ಮಾಡಿಸಿದ್ದಾರೆ. ನೀಲಂಬುರ್‌ನಲ್ಲಿರುವ ಆ್ಯರೋ ವೆಡ್ಡಿಂಗ್ ಕಂಪನಿ ಈ ಫೋಟೋಶೂಟ್ ಮಾಡಿದೆ. ರಸ್ತೆಯು ಗುಂಡಿಮಯವಾಗಿದ್ದು, ಗುಂಡಿಗಳಲ್ಲಿ ನೀರು ತುಂಬಿ ಸವಾರರು ಬಹುದಿನಗಳಿಂದ ಪರದಾಡುತ್ತಿದ್ದರು. 

ಆದ್ದರಿಂದ ಸಂಪೂರ್ಣ ಹದಗೆಟ್ಟ ರಸ್ತೆಯಲ್ಲಿಯೇ ಫೋಟೋಶೂಟ್ ನಡೆಸುವುದು ಅಧಿಕಾರಿಗಳ ನಿಷ್ಕ್ರಿಯತೆಯ ವಿರುದ್ಧ ಪ್ರತಿಭಟಿಸುವ ಒಂದು ಸಾಧನವಾಗಿದೆ ಎಂದು ಛಾಯಾಗ್ರಾಹಕ ಆಶಿಕ್ ಹೇಳಿದ್ದಾರೆ. ಈ ಯೋಜನೆಯನ್ನು ವಧುವಿಗೆ ಸೂಚಿಸಿದಾಗ, ಅವರು ಸಹ ಒಪ್ಪಿಗೆ ನೀಡಿದರು ಎಂದು ಆಶಿಕ್ ತಿಳಿಸಿದರು. ಈ ಫೋಟೋಗಳು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಆಗಿದ್ದು, ವಧುವಿಗೆ ನೆಟ್ಟಿಗರು ಬಹುಪರಾಕ್ ಎಂದಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article