-->

ಉಜಿರೆಯಲ್ಲಿ ಓಶಿಯನ್ ಪರ್ಲ್ ( OCEAN PEARL ) ಶುಭಾರಂಭ

ಉಜಿರೆಯಲ್ಲಿ ಓಶಿಯನ್ ಪರ್ಲ್ ( OCEAN PEARL ) ಶುಭಾರಂಭ

  

ಮಂಗಳೂರು: ಅತಿಥಿ ಸೇವೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್ ಓಶಿಯನ್ ಪರ್ಲ್ ಉಜಿರೆಯಲ್ಲಿ ತನ್ನ 5ನೇ ಶಾಖೆಯನ್ನು ಶುಕ್ರವಾರ ಶುಭಾರಂಭಗೊಳಿಸಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅವರು, "ಧರ್ಮಸ್ಥಳದಲ್ಲಿ ಒಳ್ಳೆಯ ಸುಸಜ್ಜಿತ ಹೋಟೆಲ್ ಇಲ್ಲ ಎಂಬ ಕೊರತೆಯನ್ನು ಬರೋಡ ಶಶಿಧರ್ ಶೆಟ್ಟಿ ಮತ್ತು ಜಯರಾಮ್ ಬನಾನ ಅವರು ನೀಗಿಸಿದ್ದಾರೆ. ಸಾಗರರತ್ನ ಹೋಟೆಲ್ಗಳು ಇಡೀ ದೇಶದೆಲ್ಲೆಡೆ ಸ್ಥಾಪಿಸಲ್ಪಟ್ಟಿದ್ದು ಹೆಸರೇ ಹೇಳುವಂತೆ ಓಶಿಯನ್  ಪರ್ಲ್ ಸಾಗರದ ಮುತ್ತಿನಂತೆ ನಿರಂತರ ಹೊಳೆಯುತ್ತಿರಲಿ" ಎಂದರು.

ಹೋಟೆಲ್ ಕಟ್ಟಡವನ್ನು ಶಶಿಧರ್ ಶೆಟ್ಟಿ ಅವರು ತಮ್ಮ ತಾಯಿ ಕಾಶಿ ಶೆಟ್ಟಿ ಹೆಸರಿನಲ್ಲಿ ನಿರ್ಮಿಸಿದ್ದು ಕಾಶಿ ಪ್ಯಾಲೇಸ್ ಹೆಸರಿನಲ್ಲಿ ಸುಸಜ್ಜಿತ ಹೋಟೆಲ್ ನಿರ್ಮಾಣ ಮಾಡಲಾಗಿದೆ.

30 ವರ್ಷಗಳಿಂದ ಗುಜರಾತ್ನಲ್ಲಿ ಕೇಟರಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು ಊರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಹೋಟೆಲ್ ಉದ್ಯಮ, ವಸತಿ ಸೌಲಭ್ಯ ಪ್ರಾರಂಭಿಸುವ ಉದ್ದೇಶದಿಂದ ತಾಯಿ ಹೆಸರಲ್ಲಿ ಸಂಸ್ಥೆ ನಿರ್ಮಾಣ ಮಾಡಿದ್ದಾಗಿ ಅವರು ಹೇಳಿದರು.

ಓಶಿಯನ್ ಪರ್ಲ್ ಸಮೂಹ ಸಂಸ್ಥೆಯ ಜಯರಾಮ್ ಬನಾನ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹರಿಕೃಷ್ಣ ಬಂಟ್ವಾಳ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವೈ., ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಕೃಷ್ಣ ಪಾಲೇಮಾರ್, ಆಳ್ವಾಸ್ ಪ್ರತಿಷ್ಠಾನದ ಮೋಹನ್ ಆಳ್ವ, ವಿವೇಕ್ ಆಳ್ವ, ಓಶಿಯನ್ ಪರ್ಲ್ ಉಪ ನಿರ್ದೇಶಕ ಗಿರೀಶ್, ಪಟ್ಲ ಸತೀಶ್ ಶೆಟ್ಟಿ, ಶರತ್ ಕೃಷ್ಣ ಪಡ್ವೆಟ್ನಾಯ ಉಪಸ್ಥಿತರಿದ್ದರು.

ಓಷನ್ ಪರ್ಲ್ ವಿಶೇಷತೆ:

3 ಮಹಡಿಗಳ ಐಷಾರಾಮಿ ಹೋಟೆಲ್ ಇದಾಗಿದ್ದು 34 ಕೊಠಡಿಗಳನ್ನು ಹೊಂದಿದೆ. ಇದರಲ್ಲಿ 34 ರೂಮ್ಗಳಿದ್ದು, 31 ಎಕ್ಸಿಕ್ಯೂಟಿವ್ ಸೂಟ್ ರೂಮ್ಗಳು, 2 ಸೂಟ್ ರೂಮ್ಗಳು ಮತ್ತು 1 ಪ್ರೆಸಿಡೆಂಟ್ ಸೂಟ್ ರೂಮ್ ಅನ್ನು ಹೊಂದಿದೆ. 'ಪೆಸಿಫಿಕ್'ನಲ್ಲಿ ಸುಮಾರು 200 ಜನರಿಗೆ ಅವಕಾಶ ಕಲ್ಪಿಸುವ ಅತ್ಯಾಧುನಿಕ ಕಾನ್ಸರೆನ್ಸ್ ಹಾಲ್, 'ಸಾಗರ ರತ್ನ' ಬ್ರಾಂಡ್ ಸಸ್ಯಾಹಾರಿ ರೆಸ್ಟೋರೆಂಟ್ 140 ಮಂದಿಯ ಆಸನ ವ್ಯವಸ್ಥೆಯ ಸಾಮರ್ಥ್ಯ ಹೊಂದಿದ್ದು 50 ಮಂದಿ ಕುಳಿತುಕೊಂಡು ತಿನ್ನುವ ಮಾಂಸಾಹಾರಿ ರೆಸ್ಟೋರೆಂಟ್ ಕೋರಲ್ ಅನ್ನು ಹೊಂದಿದೆ. ಇಂದಿನ ಪೀಳಿಗೆಯ ಜನರ ಗುಣಮಟ್ಟದ ಜೀವನಕ್ಕೆ ಮತ್ತು ತಮ್ಮ ಅಗತ್ಯಗಳನ್ನು ಪೂರೈಸಲೂ ಇಲ್ಲಿ ಅವಕಾಶವಿದೆ.

Ads on article

Advertise in articles 1

advertising articles 2

Advertise under the article