ನಯನತಾರಾ - ವಿಘ್ನೇಶ್ ಶಿವನ್ ಅದ್ದೂರಿ ವಿವಾಹದ ಟೀಸರ್ ಬಿಡುಗಡೆ ಮಾಡಿದ ನೆಟ್ ಫ್ಲಿಕ್ಸ್: ಸಂಪೂರ್ಣ ವೀಡಿಯೋ ನೋಡಲು ಕಾತರರಾದ ಅಭಿಮಾನಿಗಳು

ಚೆನ್ನೈ: ಸೌತ್ ಇಂಡಿಯಾದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ಸ್ಟಾರ್ ಡೈರೆಕ್ಟರ್ ವಿಘ್ನೇಶ್ ಶಿವನ್ ಅವರು ಸತಿ-ಪತಿಗಳಾಗಿ ಕಳೆದ ಜೂನ್ 9 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಒಪ್ಪಂದದಂತೆ ಅವರ ವಿವಾಹ ಸಮಾರಂಭದ ಸಂಪೂರ್ಣ ಚಿತ್ರೀಕರಣವನ್ನು ಒಟಿಟಿ ಪ್ಲಾಟ್ ಫಾರ್ಮ್ ನೆಟ್‌ಫಿಕ್ಸ್ ಸೆರೆಹಿಡಿದಿತ್ತು. ಇದೀಗ ಈ ತಾರಾದಂಪತಿಯ ಅದ್ಧೂರಿ ವಿವಾಹದ ದೃಶ್ಯವನ್ನು ತೆರೆಯ ಮೇಲೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುವ ನೆಟ್‌ಫಿಕ್ಸ್, ಸಣ್ಣ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ.

ಟೀಸರ್ ಗೆ ನೆಟ್‌ಫಿಕ್ಸ್ “ನಯನತಾರಾ : ಕಾಲ್ಪನಿಕ ಕಥೆಯ ಆಚೆಗೆ” ಎಂಬ ಶೀರ್ಷಿಕೆಯನ್ನು ನೀಡಿದೆ. ಒಂದು ನಿಮಿಷದ ಟೀಸರ್‌ನಲ್ಲಿ ಮದುವೆಯ ತಯಾರಿಯನ್ನು ತೋರಿಸಲಾಗಿದೆ. ಅಲ್ಲದೆ, ನಯನಾ ಮತ್ತು ವಿಘ್ನೇಶ್ ಅವರ ಸಂದರ್ಶನದ ತುಣುಕು ಇದೆ. ವಿವಾಹದ ಬಳಿಕ ಮಾಧ್ಯಮ ಸಂದರ್ಶನ, ಸಾಮಾಜಿಕ ಜಾಲತಾಣ ಹಾಗೂ ಸಿನಿಮಾ ಪ್ರಚಾರಗಳಿಂದ ಅಂತರಕಾಯ್ದುಕೊಂಡಿದ್ದ ನಯನಾ, ಇದೀಗ ನೆಟ್‌ಫಿಕ್ಸ್ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದ್ದಾರೆ. 

ಟೀಸರ್‌ನಲ್ಲಿ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಕೈ ಕೈ ಹಿಡಿದು ನಡೆದುಕೊಂಡು ಬರುವುದು. ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು ಮತ್ತು ತಮ್ಮ ಮದುವೆಗೆ ತಯಾರಾಗುತ್ತಿರುವುದನ್ನು ತೋರಿಸುತ್ತದೆ. ಸದ್ಯ ಟೀಸರ್ ವೈರಲ್ ಆಗಿದ್ದು, ಯಾವಾಗ ಬಿಡುಗಡೆ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ನೆಟ್‌ಫಿಕ್ಸ್ ಮದುವೆಯ ವೀಡಿಯೋ ಬಿಡುಗಡೆಯ ದಿನಾಂಕವನ್ನು ಘೋಷಿಸಿಲ್ಲ. ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

BREAKING NEWS
Loading latest news...
Join our WhatsApp Channel Powered By : Online Pudu