ಪ್ರಿಯಕರನೊಂದಿಗೆ ಜಾಲಿ ರೈಡ್ ಹೋಗುತ್ತಿದ್ದ ಪತ್ನಿಯನ್ನು ಬೆನ್ನಟ್ಟಿ ಕಪಾಳಮೋಕ್ಷ ಮಾಡಿದ ಪತಿ

ಲಕ್ನೋ: ಪ್ರಿಯಕರನೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪತಿ ನಡುರಸ್ತೆಯಲ್ಲಿ ಥಳಿಸಿರುವ ಘಟನೆ ಆಗ್ರಾದಲ್ಲಿ ನಡೆದಿದೆ.




ದಂಪತಿಗೆ ವಿವಾಹವಗಿ 10 ವರ್ಷಗಳಾಗಿದ್ದು, ಓರ್ವ ಪುತ್ರಿಯೂ ಇದ್ದಾಳೆ. ಈಕೆ ಉದ್ಯಮಿಯೊಂದಿಗೆ ಸಂಬಂಧ ಇರಿಸಿಕೊಂಡಿದ್ದು ಪತಿಗೆ ತಿಳಿದು ಬಂದಿದೆ. ಆದ್ದರಿಂದ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಹೀಗಿದ್ದರೂ ರವಿವಾರ ಪತ್ನಿ ಮನೆಯಿಂದ ಹೊರಗೆ ಹೋಗಿದ್ದಾಳೆ. ಅವಳನ್ನು ಹೇಗಾದರೂ ಕಂಡು ಹಿಡಿಯಲೇಬೇಕೆಂದು ನಿರ್ಧರಿಸಿ ಪತಿ ತನ್ನ ಪುತ್ರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹುಡುಕಾಟ ನಡೆಸಲು ಆರಂಭಿಸಿದ್ದಾನೆ.

ಆಗ ಪತ್ನಿ ಕೈಲಾಸ ಮಂದಿರ ರಸ್ತೆಯಲ್ಲಿ ಪ್ರಿಯಕರನೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿರುವುದನ್ನು ನೋಡಿ, ಫಾಲೋವ್ ಮಾಡಿಕೊಂಡು ಹೋಗಿದ್ದಾನೆ. ಇನ್ನೂ ಈ ವೀಡಿಯೋವನ್ನು ವ್ಯಕ್ತಿ ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಪ್ರಕರಣದ ನಡುವೆ ಪೊಲೀಸರು ಮಧ್ಯಪ್ರವೇಶಿಸಿ   ಸಾರ್ವಜನಿಕ ಶಾಂತಿ ಕದಡಿರುವ ಹಿನ್ನೆಲೆಯಲ್ಲಿ ಇಬ್ಬರಿಗೂ ದಂಡ ವಿಧಿಸಲಾಗಿದೆ. ಆದರೆ ಮಹಿಳೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.