Career in Fisheries Dept: ಮೀನುಗಾರಿಕಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗಳು

ಮೀನುಗಾರಿಕಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗಳು





ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಎಂಟು ಸಹಾಯಕ ನಿರ್ದೇಶಕರ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ (KPSC) ಅರ್ಜಿ ಆಹ್ವಾನಿಸಿದೆ. ‌



ಆಸಕ್ತ ಅರ್ಹ ಅಭ್ಯರ್ಥಿಗಳು ಮೀನುಗಾರಿಕಾ ಇಲಾಖೆಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.



ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 20ರಿಂದ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 19, 2022ರಂದು ಕೊನೆ ದಿನ.



ಅರ್ಜಿ ಶುಲ್ಕ ಪಾವತಿಸಲು ಅಕ್ಟೋಬರ್ 20 ಕೊನೆ ದಿನ.


ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ ರೂ.. 600; ಇತರ ವಿಭಾಗಗಳಿಗೆ ರಿಯಾಯಿತಿ ಇದೆ.


ವಿದ್ಯಾರ್ಹತೆ: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಜ್ಞಾನ ವಿಷಯದಲ್ಲಿ (ಬ್ಯಾಚುಲರ್ ಆಫ್‌ ಫಿಶರೀಸ್ ಸೈನ್ಸ್‌) ಪದವಿ


ವಯೋಮಿತಿ: ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 35 ವರ್ಷಗಳು. ನಿಯಮಾನುಸಾರ ಸಡಿಲಿಕೆ ಇದೆ.


ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ.



ಸ್ಪರ್ಧಾತ್ಮಕ ಪರೀಕ್ಷೆ

ಎ) Examನಲ್ಲಿ ತಲಾ 300 ಅಂಕಗಳ 2 ಲಿಖಿತ ಪ್ರಶ್ನೆ ಪತ್ರಿಕೆ ಇರುತ್ತವೆ. ಬಹು ಆಯ್ಕೆ ಮಾದರಿಯಲ್ಲಿ ವಸ್ತುನಿಷ್ಠ ಪ್ರಶ್ನೆ ಇರುತ್ತವೆ. ಪ್ರತಿ ಪ್ರಶ್ನೆಯೂ ನಕಾರಾತ್ಮಕ (Negetive) ಮಾರ್ಕ್‌ ನೀಡಲಾಗುವುದು.


ಎ) ಈ ಕಾಂಪಿಟಿಟಿವ್ ಪರೀಕ್ಷೆಯ ಪಠ್ಯಕ್ರಮವನ್ನು ಕೆಪಿಎಸ್‌ಸಿ ವೆಬ್‌ಸೈಟ್‌ http://kpsc.kar.nic.in/ Syllabus ನಲ್ಲಿ ಪ್ರಕಟಿಸಲಾಗಿದೆ.


ಬಿ) ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಶ್ನೆ ಪತ್ರಿಕೆಗಳು ಇರುತ್ತವೆ.


ಸಿ) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕನಿಷ್ಠ ಶೇ 35ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯ.


ಹೆಚ್ಚಿನ ಮಾಹಿತಿಗೆ: https://kpsc.kar.nic.in ಜಾಲತಾಣಕ್ಕೆ ಭೇಟಿ ನೀಡಿ.


ಅಧಿಸೂಚನೆಗಾಗಿ- https://kpsc.kar.nic.in/Notification%20of%20Asst%20Director%20of%20Fishe...(HK).pdf ಇಲ್ಲಿಗೆ ಭೇಟಿ ನೀಡಿ.