ಸರ್ಕಾರಿ ನೌಕರರಿಗೆ ಮತ್ತೊಂದು ಕಂಟಕ: ಸೇವಾ ನಿಯಮ 16a ರದ್ದು
ಸರ್ಕಾರದ ವರ್ಗಾವಣೆ ನೀತಿಯಿಂದ ಪತಿ ಪತ್ನಿಯರು ದೂರಾ ದೂರ ರಾಜ್ಯ ಸರ್ಕಾರಿ ನೌಕರರ ಅದರಲ್ಲೂ ಸಿ ಮತ್ತು ಡಿ ದರ್ಜೆಯ ನೌಕರರಿಗೆ ವರ್ಗಾವಣೆಗೆ ಇದ್ದ 16a ಕಾಯ್ದೆಯನ್ನು ಸರ್ಕಾರ ತೆಗೆದಿದ್ದು.. ಇದರಿಂದ ಸಿ ಮತ್ತು ಡಿ ದರ್ಜೆಯ ನೌಕರರು ಒಂದೇ ಕಡೆ ಕರ್ತವ್ಯ ನಿರ್ವಹಿಸುವಂತಾಗಿದೆ.
ದಂಪತಿ ನೌಕರರಿಗೂ ಸಂಕಷ್ಟ
ಗಂಡ ಹೆಂಡತಿಯರು ಇಬ್ಬರು ಸರ್ಕಾರಿ ಕೆಲಸದಲ್ಲಿ ಬೇರೆ ಬೇರೆ ಜಿಲ್ಲೆ ಅಥವಾ ವಿಭಾಗಗಳಲ್ಲಿ ನೇಮಕಾತಿಯಾಗಿದ್ದರೆ ಈ ಕಾಯ್ದೆ ತೆಗೆದಿರುವುದರಿಂದ ಅವರಿಗೂ ಸಹ ವರ್ಗಾವಣೆ ಭಾಗ್ಯ ಸಿಗದಂತಾಗಿದೆ.
ಇದರಿಂದ ಪತಿ-ಪತ್ನಿಯರು ಇಬ್ಬರು ನಿವೃತ್ತಿ ಒಂದುವವರೆಗೂ ಬೇರೆ ಬೇರೆಯಾಗಿಯೇ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಮಕ್ಕಳ ಮೇಲೆ ಮತ್ತು ಸಂಸಾರಿಕ ಜೀವನದ ಮೇಲೆ ದುಷ್ಪರಿಣಾಮ ಬೀಳುವಂತಾಗಿದೆ.
ಐಎಎಸ್ ಮತ್ತು ಕೆ ಎ ಎಸ್ ಅಧಿಕಾರಿಗಳಾದರೆ ಪತ್ನಿ ಕೆಲಸ ಮಾಡುವ ಸ್ಥಳಕ್ಕೆ ಪತಿಗೆ ವರ್ಗಾವಣೆ ಸಿಗುತ್ತದೆ ಆದರೆ ಕೆಳ ಹಂತದ ಸಿಬ್ಬಂದಿಗಳಿಗೆ ಈ ಸೌಲಭ್ಯ ಇಲ್ಲದಂತಾಗಿದೆ ಈ ಧೋರಣೆಯಿಂದ ಪತಿ ಪತ್ನಿಯರಲ್ಲಿ ಒಬ್ಬರು ಕೆಲಸ ಬಿಡಬೇಕೋ ಅಥವಾ ಡೈವರ್ಸ್ ತೆಗೆದುಕೊಳ್ಳಬೇಕೋ ಎಂಬುದು ತಿಳಿಯದಂತಾಗಿದೆ ಎಂದು ನೊಂದ ಸಿಬ್ಬಂದಿಗಳು ಹೇಳಿದ್ದಾರೆ.
ಈ ಬಗ್ಗೆ ಅಧಿಕಾರಿಗಳನ್ನು ಮತ್ತು ಸಂಬಂಧಪಟ್ಟವರಿಗೆ ವಿಚಾರಣೆ ಮಾಡಿದರೆ ನಿಮ್ಮ ತಂದೆ ತಾಯಿಯನ್ನೇ ನೀವು ಕೆಲಸ ಮಾಡುವ ಸ್ಥಳಗಳಿಗೆ ಕರೆದುಕೊಂಡು ಬನ್ನಿ ಎಂದು ತಿಳಿಸುತ್ತಾರೆ…. ಆದರೆ ಪತ್ನಿ ಅಥವಾ ಪತಿ ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅವರನ್ನು ಒಂದು ಕಡೆ ಕರ್ತವ್ಯ ನಿರ್ವಹಿಸುವಂತಾಗಲು ಈ ಕಾಯ್ದೆಯಲ್ಲಿ ವಿನಾಯಿತಿಯ ಅವಶ್ಯಕತೆ ಇದೆ
ಪೊಲೀಸ್ ಇಲಾಖೆಗೆ ಕೇವಲ ಬಾಯಿ ಮಾತಿನ ಒಪ್ಪಿಗೆ
ಪೊಲೀಸ್ ಹಾಗೂ ಇನ್ನೂ ಕೆಲ ಇಲಾಖೆಗಳಲ್ಲಿ ಈ ಕಷ್ಟ ಹೇಳತಿರದಂತಾಗಿದೆ. ಈ ಇಲಾಖೆಗಳಲ್ಲಿ ಸರಿಯಾದ ರಜೆಗಳು ಸಹ ದೊರೆಯುವುದಿಲ್ಲ ಹಬ್ಬ ಹರಿದಿನಗಳಲ್ಲಿ ವಿಶೇಷವಾದ ಬಂಧುಬಸ್ತ್ ಕರ್ತವ್ಯಗಳು ಸಹ ಇರುತ್ತವೆ… ಮಾನ್ಯ ಡಿಜಿ ಮತ್ತು ಐಜಿಪಿ ರವರು ಸರ್ಕಾರಕ್ಕೆ ಬರೆದ ಪತ್ರಕೆ ಕೇವಲ ತಾತ್ವಿಕ ಒಪ್ಪಿಗೆಯನ್ನು ನೀಡಿದ್ದು…. ಲಿಖಿತ ರೂಪದಲ್ಲಿ ಒಪ್ಪಿಗೆ ನೀಡಲು ಸರ್ಕಾರ ವಿಫಲವಾಗಿದೆ.
ಇದರಿಂದ ನೌಕರರ ಮನೋ ಸ್ಥಿತಿಯ ಮೇಲು ಸಹ ದುಷ್ಪರಿಣಾಮ ಬೀಳುವಂತಹ ಸ್ಥಿತಿ ಉಂಟಾಗಿದೆ..ಈ ವರ್ಗಾವಣೆ ನೀತಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವು ಸಹ ಕಣ್ಣು ಮುಚ್ಚಿ ಕುಳಿತಿದೆ.
ಈ ವರ್ಗಾವಣೆಯಲ್ಲಿ ಸೇವಾ ಜೇಷ್ಠತೆಯನ್ನು ಬಿಟ್ಟುಕೊಟ್ಟು ಹೋಗುವುದರಿಂದ ಬೇರೆ ನೌಕರರಿಗೂ ಯಾವುದೆ ತೊಂದರೆಯಾಗುವುದಿಲ್ಲ.
ಮಾನ್ಯ ಮುಖ್ಯಮಂತ್ರಿಗಳಿಂದ ಮಾತ್ರ 16 ಏ ಕಾಯ್ದೆಗೆ ತಿದ್ದುಪಡಿ ಮಾಡಲು ಸಾಧ್ಯವಿದ್ದು ಪತಿ ಪತ್ನಿ ಪ್ರಕರಣದಲ್ಲಾದರೂ ಅಂತರ್ ಜಿಲ್ಲೆ ಅಥವಾ ವಿಭಾಗಕ್ಕೆ ವರ್ಗಾವಣೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿ ಸಮಸ್ಯೆ ಬಗೆಹರಿಸಿ ಕೊಡುವಂತೆ ನೌಕರರು ಕೋರಿದ್ದಾರೆ
