-->
ನೀಟ್ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಪಾರಮ್ಯ

ನೀಟ್ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಪಾರಮ್ಯ

 


ಮೂಡುಬಿದಿರೆ: 2022ನೇ ಜುಲೈ ತಿಂಗಳಿನಲ್ಲಿ ನಡೆದ ರಾಷ್ಟ್ರೀಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮನೋಜ್ ಎನ್ 690 ಅಂಕ ಪಡೆಯುವ ಮೂಲಕ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 54ನೇ ರ್ಯಾಂಕ್ ಗಳಿಸಿದ್ದಾರೆ. ರಾಹುಲ್ ಜಿ ಪಾಟೀಲ್ 39ನೇ ರ‍್ಯಾಂಕ್ ಹಾಗೂ ನರಸೇಗೌಡ ಬಿ ಎಂ 85ನೇ ರ‍್ಯಾಂಕ್ ಗಳಿಸಿದ್ದಾರೆ.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 600 ಕ್ಕಿಂತ ಅಧಿಕ ಅಂಕಗಳನ್ನ 31 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕಗಳನ್ನ 237 ವಿದ್ಯಾರ್ಥಿಗಳು 4 ಕಿಂತ ಅಧಿಕ ಅಂಕಗಳನ್ನು 576 ವಿದ್ಯಾರ್ಥಿಗಳು 300ಕ್ಕಿಂತ ಅಧಿಕ ಅಂಕಗಳನ್ನು 1002 ವಿದ್ಯಾರ್ಥಿಗಳು ಪಡೆದಿದ್ದಾರೆ.

500ಕ್ಕಿಂತ ಅಧಿಕ ಅಂಕಗಳಿಸಿದ 237 ವಿದ್ಯಾರ್ಥಿಗಳಲ್ಲಿ 132 ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಸ್ವೀಕಾರ ದಡಿ ವಿದ್ಯಾಭ್ಯಾಸವನ್ನು ಪೂರೈಸಿದ್ದು, ಎರಡು ಕೋಟಿಗೂ ಅಧಿಕ ವೆಚ್ಚವನ್ನು ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ವ್ಯಯಿಸಲಾಗಿದೆ. ಈ ಬಾರಿ 450ಕ್ಕಿಂತ ಅಧಿಕ ವಿದ್ಯಾರ್ಥಿಗಳು ಸರಕಾರಿ ಕೋಟಾ ದಡಿ ವೈದ್ಯಕೀಯ ಎಂಬಿಬಿಎಸ್ ಸೀಟು ಪಡೆಯುವ ಸಾಧ್ಯತೆ ಇದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ ಸದಾಕತ್ ಹಾಗೂ ಆಡಳಿತಾಧಿಕಾರಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article