-->

ಬ್ರಿಟನ್ ನ ರಾಣಿ ಎಲಿಜಬೆತ್ -2 ಬರೆದಿರುವ ರಹಸ್ಯ ಪತ್ರವನ್ನು 2085ರವರೆಗೆ ತೆರೆಯುವಂತಿಲ್ಲ: 1986ರಿಂದ ಈ ಪತ್ರ ಸಿಡ್ನಿಯಲ್ಲಿ ಭದ್ರ

ಬ್ರಿಟನ್ ನ ರಾಣಿ ಎಲಿಜಬೆತ್ -2 ಬರೆದಿರುವ ರಹಸ್ಯ ಪತ್ರವನ್ನು 2085ರವರೆಗೆ ತೆರೆಯುವಂತಿಲ್ಲ: 1986ರಿಂದ ಈ ಪತ್ರ ಸಿಡ್ನಿಯಲ್ಲಿ ಭದ್ರ

ಲಂಡನ್‌: ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅವರು ಅದು 1986ರಲ್ಲಿ ಪತ್ರವೊಂದನ್ನು ಬರೆದಿದ್ದಾರೆ‌. ಆದರೆ, ಯಾರೂ ಅದನ್ನು‌ ಈವರೆಗೆ ಓದಿಲ್ಲ. ಆ ಪತ್ರದಲ್ಲಿ ಏನು ಬರೆದಿದ್ದಾರೆ ಎಂಬುದೂ ಗೊತ್ತಿಲ್ಲ. ಈಗ ರಾಣಿ ಬದುಕಿಲ್ಲ. ಹಾಗೆಂದು ಆ ಪತ್ರವನ್ನು ಈಗಲಾದರೂ ಓದಬಹುದೇ ಎಂದರೆ ಇಲ್ಲ ಎನ್ಮಲಾಗುತ್ತದೆ.

ಹೌದು..‌ 2085ರವರೆಗೂ ಆ ಪತ್ರದಲ್ಲಿರುವ ವಿಚಾರ ರಹಸ್ಯವಾಗಿಯೇ ಇರಬೇಕೆಂಬುದು ಸ್ವತಃ ರಾಣಿಯೇ ಮಾಡಿರುವ ಆಜ್ಞೆಯಾಗಿದೆ. ಈ ರಹಸ್ಯ ಪತ್ರ ಈಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ವಿಕ್ಟೋರಿಯಾ ಕಟ್ಟಡದ ಕೋಣೆಯಲ್ಲಿ ಭದ್ರವಾಗಿದೆ. ಅದನ್ನು ನಿರ್ಬಂಧ ಪ್ರದೇಶವೊಂದರಲ್ಲಿ ಗಾಜಿನ ಪೆಟ್ಟಿಗೆಯಲ್ಲಿ ರಕ್ಷಿಸಿಡಲಾಗಿದೆ.

ಪತ್ರದಲ್ಲಿ ಏನು ಬರೆಯಲಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ, ರಾಣಿಯು ಸಿಡ್ನಿಯ ಜನರಿಗೆ ಈ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ. ಪತ್ರದ ಹೊರಗೆ ನೀಡಿರುವ ಟಿಪ್ಪಣಿಯಲ್ಲಿ ಸಿಡ್ನಿ ಮೇಯರ್‌ ಅನ್ನು ಉದ್ದೇಶಿಸಿ, “ನೀವೇ ಆಯ್ಕೆ ಮಾಡಿರುವ ದಿನಾಂಕದಂತೆ 2085ರಲ್ಲಿ ಈ ಪತ್ರವನ್ನು ತೆರೆಯಬೇಕು. ಈ ಮೂಲಕ ಸಿಡ್ನಿಯ ಜನತೆಗೆ ನಾನು ನೀಡಿರುವ ಸಂದೇಶವನ್ನು ರವಾನಿಸಬೇಕು’ ಎಂದು ಬರೆಯಲಾಗಿದೆ.

Ads on article

Advertise in articles 1

advertising articles 2

Advertise under the article