-->

ಕೌನ್ ಬನೇಗ ಕರೋಡ್ ಪತಿಯ ಸೀಸನ್ 14ನಲ್ಲಿ ಕೋಟಿ ರೂ. ಗೆದ್ದು ಬೀಗಿದ ಮೊದಲ ಮಹಿಳೆ

ಕೌನ್ ಬನೇಗ ಕರೋಡ್ ಪತಿಯ ಸೀಸನ್ 14ನಲ್ಲಿ ಕೋಟಿ ರೂ. ಗೆದ್ದು ಬೀಗಿದ ಮೊದಲ ಮಹಿಳೆ

ಮುಂಬೈ: ಕೌನ್‌ ಬನೇಗ ಕರೋಡ್‌ಪತಿಯ ಸೀಸನ್‌ 14 ನಡೆಯುತ್ತಿದೆ. ಈ ಸೀಸನ್ ನಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ನಿವಾಸಿ ಕವಿತಾ ಎಂಬವರು ಕೋಟಿ ರೂ. ಗೆದ್ದ ಮೊದಲ ಮಹಿಳೆಯಾಗಿದ್ದಾರೆ.

ಇದೀಗ ಕವಿತಾ ಅವರಿಗೆ 7.5 ಕೋಟಿ ರೂ. ಪ್ರಶ್ನೆಯನ್ನೂ ಕೇಳಲಾಗಿದೆ. ಈ ಕಾರ್ಯಕ್ರಮದ ಪ್ರೋಮೋವನ್ನು ಸೋನಿ ಟಿವಿ ಹಂಚಿಕೊಂಡಿದೆ. ಜನತೆ ಈ ಪ್ರಶ್ನೆಯ ಬಗ್ಗೆ ಭಾರೀ ಕುತೂಹಲ ಹೊಂದಿದ್ದಾರೆ.

ವಿಶೇಷವೆಂದರೆ ಕೌನ್‌ ಬನೇಗ ಕರೋಡ್‌ಪತಿ ಸೀಸನ್‌ 14ರಲ್ಲಿ ಕೋಟಿ ಗೆದ್ದ ಮೊದಲ ಮಹಿಳೆಯಾಗಿರುವ ಕವಿತಾ ಅವರು ದ್ವಿತೀಯ ಪಿಯುಸಿ ವ್ಯಾಸಂಗವನ್ನಷ್ಟೇ ಪೂರೈಸಿದ್ದಾರೆ. ಈ ಕಾರ್ಯಕ್ರಮ ಸೋಮವಾರ ಮತ್ತು ಮಂಗಳವಾರ ಸೋನಿ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

Ads on article

Advertise in articles 1

advertising articles 2

Advertise under the article