ಮಂಗಳೂರು: ಕೇರಳದಲ್ಲಿ ವಾಹನ ಸಂಚಾರ ಸುಗಮಗೊಳಿಸಿದ ಶಾಸಕ ಖಾದರ್
Sunday, August 14, 2022
ಮಂಗಳೂರು: ಒಂದೂವರೆ ಗಂಟೆಗಳಿಂದ ರಸ್ತೆಯಲ್ಲಿದ್ದ ವಾಹನ ದಟ್ಟಣೆಯನ್ನು ಕೆಲವೇ ನಿಮಿಷಗಳಲ್ಲಿ ಸುಗಮಗೊಳಿಸಿ ಸರಾಗ ವಾಹನ ಸಂಚಾರಕ್ಕೆ ಅನುವು ಮಾಡಿರುವ ಉಳ್ಳಾಲ ಶಾಸಕ, ಕರ್ನಾಟಕ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಯು.ಟಿ.ಖಾದರ್ ನಿನ್ನೆ ರಾತ್ರಿ 8ಗಂಟೆ ವೇಳೆಗೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಮೊಗ್ರಲ್ ಪುತ್ತೂರುನಿಂದ ಕುಂಬಳೆವರೆಗೆ ರಸ್ತೆಯಲ್ಲಿ ಭಾರೀ ವಾಹನ ದಟ್ಟಣೆ ಕಂಡು ಬಂದಿತ್ತು. ಒಂದೂವರೆ ಗಂಟೆಗಳ ಕಾಲ ಜನರು ಈ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದರು.
ಅದೇ ದಾರಿಯಾಗಿ ಬಂದ ಯು.ಟಿ.ಖಾದರ್ ಅವರು ತಕ್ಷಣ ಕಾರಿನಿಂದ ಇಳಿದು ಟ್ರಾಫಿಕ್ ಸುಗಮಕ್ಕೆ ಯತ್ನಿಸಿದ್ದಾರೆ. ಎಲ್ಲಾ ವಾಹನಗಳನ್ನು ಮುಂದಕ್ಕೆ ಹೋಗಲು ಮಾರ್ಗದರ್ಶನ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ.