ಬೀದರ್: ಮದುವೆಗೆ ಕುಟುಂಬಸ್ಥರ ನಿರಾಕರಣೆ ಪ್ರಿಯಕರ ಆತ್ಮಹತ್ಯೆ; ಆತನ ದಾರಿ ಹಿಡಿದ ಪ್ರೇಯಸಿ

ಬೀದರ್: ಮದುವೆಗೆ ಕುಟುಂಬಸ್ಥರು ಒಪ್ಪಿಕೊಂಡಿಲ್ಲವೆಂದು ಮನನೊಂದು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಪ್ರೇಯಸಿಯೂ ಅವನ ದಾರಿಯನ್ನೇ ಹಿಡಿದ ಘಟನೆ ಬೀದರ್ ನಲ್ಲಿ ನಡೆದಿದೆ.

ಬೀದರ್ ಲಾಡಗೇರಿ ಬಡಾವಣೆಯ ನಿವಾಸಿಗಳಾದ ಶರತ್ ( 28 ) ಹಾಗೂ ಸಂಗೀತಾ ( 26 ) ಆತ್ಮಹತ್ಯೆಗೆ ಶರಣಾದವರು ದುರ್ದೈವಿ ಪ್ರೇಮಿಗಳು.

ಶರತ್ ಹಾಗೂ ಸಂಗೀತಾ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಸಂಗೀತಾರಿಗೆ ಆಕೆಯ ಪೋಷಕರು ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ನೆರವೇರಿಸಿದ್ದರು. ಶೀಘ್ರದಲ್ಲಿ ಮದುವೆ ಸಹ ನಡೆಯಬೇಕಿತ್ತು‌. ಪರಿಣಾಮ ಮನನೊಂದು ಶರತ್ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಪ್ರಿಯಕರನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಂಗೀತಾ ತಮ್ಮ ಮನೆಯ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಈ ಬಗ್ಗೆ ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu