Subrahmanya:- ವಿವಾಹಿತೆಯ ಮದುವೆಯಾಗುವದೆಂದು ನಂಬಿಸಿ ಅತ್ಯಾಚಾರ. ಪ್ರಕರಣ ದಾಖಲು..

ಸುಬ್ರಹ್ಮಣ್ಯ

ವಿವಾಹಿತ ಮಹಿಳೆಯನ್ನು ಅತ್ಯಾಚಾರಗೈದು ಮದುವೆಯಾಗುತ್ತೇನೆಂದು ನಂಬಿಸಿ 1.70 ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಯು ತನ್ನ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೇ.20 ರಂದು ರಾತ್ರಿ 10 ಗಂಟೆಗೆ ಪವನ್ ಎಂಬಾತ ಮದ್ಯಪಾನ ಮಾಡಿಕೊಂಡು ಯುವತಿಯನ್ನು ಅತ್ಯಾಚಾರಗೈದಿದ್ದಾನೆ. ಈ ಬಗ್ಗೆ  ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದಾಗ ನಾನು ನಿನ್ನನ್ನು ಮದುವೆಯಾಗುತ್ತೇನೆ. ಪೊಲೀಸ್ ಕಂಪ್ಲೇಟ್ ಮಾಡಬೇಡ ಎಂದು ಹೇಳಿ ವಕೀಲರ ಮುಖಾಂತರ ಲಿಖಿತ ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಮಹಿಳೆಯಿಂದ 1.70 ಲಕ್ಷ  ರೂಪಾಯಿ ಹಣವನ್ನು ಪಡೆದುಕೊಂಡು ಈಗ ಮದುವೆಯಾಗುವುದಿಲ್ಲ ಎಂದು ವಂಚಸಿದ್ದಾನೆ ಎಂದು ದೂರಲಾಗಿದೆ. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu