ಪಾನಮತ್ತ ನೌಕಾಸೇನೆಯ ಸಿಬ್ಬಂದಿಯಿಂದ ರಂಪಾಟ: ಗದರಿಸಿ ಓಡಿಸಿದ ಸಾರ್ವಜನಿಕರು

ಉತ್ತರಕನ್ನಡ: ಪಾನಮತ್ತನಾಗಿದ್ದ ನೌಕಾಸೇನೆಯ ಸಿಬ್ಬಂದಿ ಕೆಎಸ್ಆರ್ ಟಿಸಿ ಚಾಲಕನ ಮೇಲೆಯೇ ಹಲ್ಲೆ ಮಾಡಿರುವ ಪ್ರಕರಣವೊಂದು ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹಟ್ಟಿಕೇರಿ ಎಂಬಲ್ಲಿ ನಡೆದಿದೆ. 

ನೌಕಾಸೇನೆಯ ಸಿಬ್ಬಂದಿ ಎನ್ನಲಾದ ವ್ಯಕ್ತಿಯೋರ್ವನು ಹಟ್ಟಿಕೇರಿ ಟೋಲ್ ಗೇಟ್ ಬಳಿ ಸರ್ಕಾರಿ ಬಸ್ ಅನ್ನು ನಿಲ್ಲಿಸಿ ಪುಂಡಾಟ ನಡೆಸಿದ್ದಾನೆ. ಅಲ್ಲದೆ ಆತ ಬಸ್ ಕೀಯನ್ನು ಕಸಿದು ಚಾಲಕನನ್ನು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕ ಅತಿರೇಕದಿಂದ ವರ್ತಿಸಿರುವ ಈ ವ್ಯಕ್ತಿಯನ್ನು ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರೆಲ್ಲ ಸೇರಿ ಗದರಿಸಿ ಓಡಿಸಿದ್ದಾರೆ. ಹಲ್ಲೆ ನಡೆಸಿದ ವ್ಯಕ್ತಿ ಯಾರು, ಎಲ್ಲಿಯವನು ಎಂಬ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.