-->
OP - Pixel Banner ad
Kadaba :- ಕೊಟ್ಟಿಗೆಗೆ ಸಿಡಿಲು ಬಡಿದು ದನ ಬಲಿ.ವಯರಿಂಗ್ ಸಂಪೂರ್ಣ ನಾಶ..!

Kadaba :- ಕೊಟ್ಟಿಗೆಗೆ ಸಿಡಿಲು ಬಡಿದು ದನ ಬಲಿ.ವಯರಿಂಗ್ ಸಂಪೂರ್ಣ ನಾಶ..!

ಕಡಬ

ಕಡಬ ಪರಿಸರದಲ್ಲಿ ಮಂಗಳವಾರ ಸಂಜೆ ಸಿಡಿಲಿನ ಆರ್ಭಟದೊಂದಿಗೆ ಭಾರಿ ಗಾಳಿ‌ ಮಳೆಯಾಗಿದ್ದು, ಮರ್ಧಾಳದಲ್ಲಿ ಕೊಟ್ಟಿಗೆಯೊಂದಕ್ಕೆ ಸಿಡಿಲು ಬಿದ್ದ ಪರಿಣಾಮ ದನವೊಂದು ಬಲಿಯಾದ ಘಟನೆ ನಡೆದಿದೆ.

ಮರ್ಧಾಳ ಸಮೀಪದ ಐತ್ತೂರು ಗ್ರಾಮದ ಕೊಡೆಂಕೀರಿ ನಿವಾಸಿ ಕೊರಗಪ್ಪ ಗೌಡ
ಎಂಬವರ ಮನೆಯ ವಯರಿಂಗ್ ಸಿಡಿಲಿನ ಆರ್ಭಟಕ್ಕೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಇನವರ್ಟರ್ ಗೆ ಹಾನಿಯಾಗಿದೆ. ದನದ ಕೊಟ್ಟಿಗೆಗೆ ಸಿಡಿಲು ಬಡಿದ ಪರಿಣಾಮ ಹಸುವೊಂದು ಅಸುನೀಗಿದೆ. ಕೊಟ್ಟಿಗೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ. ಈ ಸಮಯದಲ್ಲಿ ಮನೆ ಮಂದಿ ಹೊರಗಡೆ ಇದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಪರಿಸರದ ಹಲವೆಡೆ ಭಾರೀ ಗಾಳಿ ಮಳೆಗೆ ಅಪಾರ ಕೃಷಿ ಹಾನಿಯಾಗಿದೆ. ಅಡಿಕೆ ಮರಗಳು, ಬಾಳೆ ಗಿಡಗಳು ನೆಲಕ್ಕುರುಳಿವೆ.

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242