-->
ಬೆಂಗಳೂರು: ಹೆಲ್ಮೆಟ್ ಧರಿಸಿ ಸರಗಳವು ಮಾಡುತ್ತಿದ್ದ ಕತರ್ನಾಕ್ ಸರಗಳ್ಳರು ಖಾಕಿ ಬಲೆಗೆ

ಬೆಂಗಳೂರು: ಹೆಲ್ಮೆಟ್ ಧರಿಸಿ ಸರಗಳವು ಮಾಡುತ್ತಿದ್ದ ಕತರ್ನಾಕ್ ಸರಗಳ್ಳರು ಖಾಕಿ ಬಲೆಗೆ

ಬೆಂಗಳೂರು: ಹೆಲ್ಮಟ್ ಧರಿಸಿ ಮಹಿಳೆಯರ ಸರಗಳನ್ನು ಎಳೆದೊಯ್ದು ಪರಾರಿಯಾಗುತ್ತಿದ್ದ ಇಬ್ಬರು ಖತರ್ನಾಕ್ ಸರಗಳ್ಳರನ್ನು ದಕ್ಷಿಣ ವಿಭಾಗದ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಸರಗಳ್ಳರ ಮೇಲಿದ್ದ 51 ಪ್ರಕರಣಗಳನ್ನು ಪತ್ತೆಹಚ್ಚಿ 1.5 ಕೋಟಿ ರೂ.ಮೌಲ್ಯದ ಚಿನ್ನದ ಸರಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 

ತಮಿಳುನಾಡು ಮೂಲದ ಸಂತೋಷ್ ( 35 ) ಹಾಯ ಬೆಂಗಳೂರಿನ ರವಿ ( 37 ) ಬಂಧಿತ ಆರೋಪಿಗಳು.

ಆರೋಪಿಗಳು ಬೈಕ್‌ಗಳು ಮತ್ತು ಕಾರುಗಳನ್ನು ಕೃತ್ಯಕ್ಕೆ ಬಳಸಿಕೊಂಡು ಹೆಲ್ಮೆಟ್ ಧರಿಸಿ ಚಿನ್ನದ ಸರವನ್ನು ಎಳೆದೊಯ್ಯುತ್ತಿದ್ದರು. ಇದೀಗ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 2.5 ಕೆಜಿ ತೂಕದ 51 ವಿವಿಧ ಚಿನ್ನದ ಸರಗಳು, ಎರಡು ದ್ವಿಚಕ್ರ ವಾಹನಗಳು, ಎರಡು ನಾಲ್ಕು ಚಕ್ರದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ . 

ಆರೋಪಿಗಳು ಬ್ಯಾಡರಹಳ್ಳಿ , ಮಹಾಲಕ್ಷ್ಮಿಪುರಂ ಸೇರಿದಂತೆ ನಗರದ ಒಟ್ಟು 32 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 51 ಸರಗಳನ್ನು ಅಪಹರಣ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಸರಗಳವು ನಡೆದ ಸ್ಥಳಗಳಿಂದ ಸುಮಾರು 300 ಕಿ.ಮೀ.ವರೆಗೆ ಪೊಲೀಸರು ಸಿಸಿ ಟಿವಿಗಳನ್ನು ಪರಿಶೀಲನೆ ಮಾಡಿ , ಆರೋಪಿ ಸಂತೋಷ್‌ನನ್ನು ಬಂಧಿಸಿದ್ದಾರೆ . ಸಂತೋಷ್ ಸತತ ನಾಲ್ಕು ವರ್ಷಗಳಿಂದ ಸರಗಳ್ಳತನಕ್ಕಿಳಿದು ಪೊಲೀಸರ ಕಣ್ಣಪ್ಪಿಸಿ ಅಲೆದಾಡುತ್ತಿದ್ದು , ಇದೀಗ ಸಿಕ್ಕಿಬಿದ್ದಿದ್ದಾನೆ .

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article