ಈ ವಾರ ರೂಪೇಶ್ ಅವರು ನಾಮಿನೇಷನ್ನಿಂದ ಬಚಾವ್ ಆಗುವ ಮೂಲಕ ಮುಂದಿನ ವಾರಕ್ಕೆ ಮುಂದುವರಿದಿದ್ದಾರೆ.
ಈ ವಾರ ಜಶ್ವಂತ್ ಬೋಪಣ್, ಚೈತ್ರಾ ಹಳ್ಳಿಕೇರಿ, ಅಕ್ಷತಾ, ಸಾನ್ಯಾ ಐಯ್ಯರ್, ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ, ನಂದಿನಿ, ಜಯಶ್ರೀ ಆರಾಧ್ಯ ನಾಮಿನೇಷನ್ ಲಿಸ್ಟ್ನಲ್ಲಿದ್ದಾರೆ.
ಜಶ್ವಂತ್ ಅವರು ಹೆಚ್ಚು ವೋಟ್ ಪಡೆದು ನಾಮಿನೇಟ್ ಆಗಿದ್ದಾರೆ. ಅವರು ಕಳೆದ ಮೂರು ವಾರಗಳಿಂದ ನಾಮಿನೇಟ್ ಆಗಿಲ್ಲ. ಈ ಕಾರಣಕ್ಕೆ ಮನೆಯವರು ಅವರನ್ನು ನಾಮಿನೇಟ್ ಮಾಡಿದ್ದಾರೆ. ಚೈತ್ರಾ ಅವರು ಸೇಫ್ ಗೇಮ್ ಆಡುತ್ತಿದ್ದಾರೆ ಎಂಬ ಕಾರಣಕ್ಕೆ ನಾಮಿನೇಟ್ ಆದರು. ಸೋನು ಶ್ರೀನಿವಾಸ್ ಗೌಡ, ಅಕ್ಷತಾ, ರಾಕೇಶ್ ಹೆಚ್ಚು ವೋಟ್ ಪಡೆದು ಡೇಂಜರ್ಜೋನ್ಗೆ ಬಂದಿದ್ದಾರೆ.