BigBoss: ರಾಕೇಶ್ ನನಗೆ ಟಿಶ್ಯೂ ಪೇಪರ್ ತರ ಬಳಸಿ ಬಿಸಾಕ್ತೀನಿ - ಸೋನು ಗೌಡ ಶಾಕಿಂಗ್ ಸ್ಟೇಟ್ ಮೆಂಟ್ ..!!


ಬಿಗ್ ಬಾಸ್ ನಲ್ಲಿ ಸೋನು ಸ್ಪೂರ್ತಿ ಹಾಗೂ ರಾಕೇಶ್ ನಡುವೆ ತ್ರಿಕೋನ ಲವ್ ಸ್ಟೋರಿ ಶುರುವಾಗಿದೆ. ನಾನು ನಿನ್ನನ್ನು ಇಷ್ಟ ಪಡುತ್ತೇನೆ ಅಂತಾದರೂ ಹೇಳು ಎಂದು ರಾಕೇಶ್ ಈಗಾಗಲೇ ಸ್ಫೂರ್ತಿ ಗೌಡನನ್ನು ಕೇಳಿದ್ದಾರೆ. ಅದಕ್ಕೂ ಮುನ್ನ ಸೋನು ಗೌಡ ಕೂಡ ರಾಕೇಶ್ ಮೇಲೆ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ  ಈ ಇಬ್ಬರು ಹುಡುಗಿಯರ ನಡುವೆ ಇದೀಗ ರಾಕೇಶ್ ಬಳಸಿಬಿಟ್ಟು ಟಿಶ್ಯೂ ಪೇಪರ್ ಆಗಿದ್ದಾರೆ.


ಸ್ಫೂರ್ತಿಗೌಡ ಮತ್ತು ಸೋನು ಗೌಡ ನಡುವೆ  ರಾಕೇಶ್ ವಿಚಾರವಾಗಿ ಮಾತುಕತೆ ಶುರುವಾಗುತ್ತದೆ. ಆಗ ಸೋನು ಟಿಶ್ಯೂ ಪೇಪರ್ ಬಗ್ಗೆ ಮಾತನಾಡ್ತಾ, ಟಿಶ್ಯೂ ಪೇಪರ್ ಬಳಸಿದ ಮೇಲೆ ಏನ್ ಮಾಡ್ತಾರೆ ಎಂದು ಕೇಳುತ್ತಾರೆ. ಟಿಶ್ಯೂ ಪೇಪರ್ ಬಳಸಿದ ಮೇಲೆ ಬೀಸಾಕ್ತೀವಿ ಅಂತಾರೆ ಸ್ಫೂರ್ತಿ. ಅದೇ, ನಾನು ರಾಕೇಶ್ ಅನ್ನು, ಟಿಶ್ಯೂ ಪೇಪರ್ ಅನ್ನು ಬಳಸಿ ಬಿಸಾಕಿದ್ದೀನಿ ಎನ್ನುವ ಶಾಕಿಂಗ್ ಸ್ಟೇಟ್ ಮೆಂಟ್ ಕೊಡುತ್ತಾರೆ. ಆದರೆ, ಯಾವ ಅರ್ಥದಲ್ಲಿ ಅದನ್ನು ಹೇಳಿದರು ಎಂದು ಹೇಳದೇ, ರಾಕೇಶ್ ನನ್ನು ಟಿಶ್ಯೂ ಪೇಪರ್ ಗೆ ಹೋಲಿಸಿದ್ದಾರೆ ಸೋನು.