ಬಜ್ಪೆ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪಿ ಅರೆಸ್ಟ್

ಬಜ್ಪೆ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಆರೋಪಿನ್ನು ಪೊಲೀಸರು ಬಂಧಿಸಿದ್ದಾರೆ‌. 

ಬಜ್ಪೆಯ ಅದ್ಯಪಾಡಿ ಮಾಂಟೆಬೈಲು ನಿವಾಸಿ ಮೊಹಮ್ಮದ್ ಅಝರುದ್ದೀನ್ ಬಂಧಿತ ಆರೋಪಿ. 

ಆರೋಪಿ ಅಝರುದ್ದೀನ್ ವಿರುದ್ಧ ಬಜ್ಪೆ ಠಾಣೆಯಲ್ಲಿ ದರೋಡೆ, ದನಗಳವು ಸೇರಿದಂತೆ ಎರಡು ಪ್ರಕರಣಗಳು, ಕಾರ್ಕಳ ಠಾಣೆಯಲ್ಲಿ ಎರಡು ದನಗಳವು ಪ್ರಕರಣ, ಕಾರ್ಕಳ ಗ್ರಾಮಾಂತರ, ಮೂಡುಬಿದಿರೆ ಠಾಣೆಗಳಲ್ಲಿ ತಲಾ ಒಂದೊಂದು ದನಗಳವು ಪ್ರಕರಣ ದಾಖಲಾಗಿತ್ತು‌. ಇತ್ತೀಚೆಗೆ ಎರಡು ಕಡೆಗಳಲ್ಲಿ ನಡೆದ ದನಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿ ಪೊಲೀಸ್ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. 

ಆದ್ದರಿಂದ ಈತನ ಚಲನವಲನಗಳ ಮೇಲೆ ನಿಗಾ ಇಡಲು ಆತನ ಮನೆಗೆ ಬಜ್ಪೆ ಠಾಣಾ ಪೊಲೀಸರು ತೆರಳಿದ್ದರು. ಆಗ ಈತ ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿದ್ದ ಎನ್ನಲಾಗಿದೆ‌‌. ಆದ್ದರಿಂದ ತಕ್ಷಣ ಅಝರುದ್ದೀನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಈತನ ಮನೆಯವರ ಮೇಲೂ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu