ಜೈಪುರ: ಕ್ಯಾಸಿನೊ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಕರ್ನಾಟಕದ ಕೆಲ ಉತ್ತಮ ಹುದ್ದೆಯಲ್ಲಿರುವ ಅಧಿಕಾರಿಗಳು ಸೇರಿದಂತೆ 84 ಮಂದಿ

ಜೈಪುರ: ಜೈಸಿಂಗ್‌ಪುರ ಖೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಫಾರ್ಮ್ ಹೌಸೊಂದರಲ್ಲಿ ನಡೆದಿರುವ ಕ್ಯಾಸಿನೊ ಪಾರ್ಟಿಯಲ್ಲಿ ಕರ್ನಾಟಕದ ಕೆಲ ಉತ್ತಮ ಹುದ್ದೆಯಲ್ಲಿರುವ ಅಧಿಕಾರಿಗಳು ಸೇರಿದಂತೆ 84 ಮಂದಿ ಸಿಕ್ಕಿಬಿದ್ದಿದ್ದಾರೆ. ಜೈಪುರ ಪೊಲೀಸ್ ಕಮಿಷನರೇಟ್ ವಿಶೇಷ ತಂಡ ದಾಳಿ ನಡೆಸಿರುವ ಸಂದರ್ಭದಲ್ಲಿ ಇವರೆಲ್ಲರೂ ಸಿಕ್ಕಿಬಿದ್ದಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ 13 ಮಂದಿ ಯುವತಿಯಯರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. 

ಕರ್ನಾಟಕದ ಪೊಲೀಸ್ ಇನ್‌ಸ್ಪೆಕ್ಟರ್ ಅಂಜಯ್ಯ, ಬೆಂಗಳೂರಿನ ತಹಶೀಲ್ದಾರ್ ಶ್ರೀನಾಥ್ ಹಾಗೂ ಕಾಲೇಜು ಪ್ರಾಧ್ಯಾಪಕ ಕೆ.ಎಲ್. ರಮೇಶ್ ಸೇರಿದಂತೆ ಹಲವರು ಈ ಕ್ಯಾಸಿನೊ ಮದ್ಯದ ಪಾರ್ಟಿಯಲ್ಲಿದ್ದರು ಪೊಲೀಸರು ಹೇಳಿದ್ದಾರೆ. ದಾಳಿಯ ವೇಳೆ ಪೊಲೀಸರು 9 ಹುಕ್ಕಾಗಳು, 21 ಜೋಡಿ ಬೇಸ್ತು ಕಾರ್ಡ್‌ಗಳು, 7 ಟೇಬಲ್‌ಗಳು, 100 ಕ್ಕೂ ಅಧಿಕ ಮದ್ಯದ ಬಾಟಲಿಗಳು ಹಾಗೂ 23,71,408 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. 

ಈ ಪಾರ್ಟಿಯನ್ನು ಆಯೋಜಿಸಿರುವ ಈವೆಂಟ್ ಮ್ಯಾನೇಜರ್ ನರೇಶ್ ಮಲ್ಲೋತ್ರಾ ಅಲಿಯಾಸ್ ರಾಹುಲ್ , ಅವರ ಮಗ ಮನ್ವೇಶ್ , ಫಾರ್ಮ್ ಹೌಸ್ ಮ್ಯಾನೇಜರ್ ಮೋಹಿತ್ ಸೋನಿ , ಮೀರತ್ ನಿವಾಸಿ ಮನೀಶ್ ಶರ್ಮಾ ಅವರನ್ನು ಮಾನವ ಕಳ್ಳಸಾಗಣೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ.‌ ಈ ಪಾರ್ಟಿಯಲ್ಲಿ ಕರ್ನಾಟಕ ಮಾತ್ರವಲ್ಲದೇ ತೆಲಂಗಾಣ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದ ಅಧಿಕಾರಿಗಳು ಹಾಗೂ ನಿವಾಸಿಗಳು ಇದ್ದಿದ್ದು, ಇವರೆಲ್ಲರೂ ಸಿಕ್ಕಿಬಿದ್ದಿದ್ದಾರೆ. 

ಪೊಲೀಸ್ ದಾಳಿ ದಾಳಿ ವೇಳೆ ಅಲ್ಲಿದ್ದವರು ಕುಡಿದು ಕುಪ್ಪಳಿಸಿ ಮೋಜು ಮಾಡುತ್ತು ಅಶ್ಲೀಲ ರೀತಿಯಲ್ಲಿದ್ದ ಅಧಿಕಾರಿಗಳನ್ನು  ನೋಡಿ ಪೊಲೀಸರೇ ಬೆರಗಾಗಿದ್ದಾರೆ. ಮದ್ಯದೊಂದಿಗೆ 5 ಟೇಬಲ್‌ಗಳಲ್ಲಿ ಡ್ಯಾನ್ಸ್ ಪಾರ್ಟಿಯೊಂದಿಗೆ ಆನ್‌ಲೈನ್ ಕ್ಯಾಸಿನೊ ಸಹ ನಡೆಯುತ್ತಿತ್ತು. ಅಲ್ಲದೇ ಅಲ್ಲಿದ್ದವರು ಹುಕ್ಕಾ ಸಹ ಸೇದುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯ ಈವೆಂಟ್ ಕಂಪೆನಿಯೊಂದು ಫಾರ್ಮ್ ಹೌಸ್‌ನ್ನು 2 ದಿನಗಳ ಕಾಲ ಬಾಡಿಗೆ ಪಡೆದು, ಕ್ಯಾಸಿನೊ ಜೊತೆಗೆ ಜೂಜಾಟ ಸಹ ನಡೆಸುತ್ತಿತ್ತು. ಜೂಜಾಡುತ್ತಿದ್ದವರಲ್ಲಿ ಅನೇಕರು ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದವರೇ ಆಗಿರುವುದಾಗಿ ಹೆಚ್ಚುವರಿ ಪೊಲೀಸ್ ಕಮಿಷನರ್ ಕ್ರೈಂ ಅಜಯ್‌ಪಾಲ್ ಲಂಬಾ ಹೇಳಿದ್ದಾರೆ . 

ಹೊರಗಿನಿಂದ ಯುವತಿಯರನ್ನು ಇಲ್ಲಿಗೆ ಬಂದವರಿಗೆ ಒದಗಿಸಲಾಗುತ್ತಿತ್ತು. ಆರೋಪಿ ಮನೀಶ್ ನೇಪಾಳದಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ವ
ಬಂದಿದೆ. ಹೆಚ್ಚಿನ ತನಿಖೆಯಲ್ಲಿ ಇನ್ನಷ್ಟು ವಿಚಾರಗಳು ಬೆಳಕಿಗೆ ಬರಲಿದೆ.