ಕೆಪಿಟಿಸಿಎಲ್‌ ನೇಮಕಾತಿ ಪರೀಕ್ಷೆ: ಅಭ್ಯರ್ಥಿಗಳಿಗೆ ಮಾರ್ಗಸೂಚಿ ಹೀಗಿದೆ!

ಬೆಂಗಳೂರು: ಕೆಪಿಟಿಸಿಎಲ್‌ ಎಇ, ಜೆಇ, ಸಹಾಯಕರು ಸೇರಿದಂತೆ 1492 ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆ ಆಗಸ್ಟ್‌ 7 ರಂದು ನಡೆಯಲಿದೆ. 

ಈ ಪರೀಕ್ಷೆಗೆ ಹಾಜರಾಗುವ  ಅಭ್ಯರ್ಥಿಗಳಿಗೆ ಇಂದು ಅಡ್ಮಿಷನ್‌ ಟಿಕೆಟ್‌ ಅನ್ನು ಅಪ್‌ಲೋಡ್‌ ಮಾಡಲಾಗಿದೆ. ಜೊತೆಗೆಪರೀಕ್ಷೆಯ ಸಂಬಂಧ ಅಭ್ಯರ್ಥಿಗಳು ಧರಿಸಬೇಕಾದ ವಸ್ತ್ರ ಸಂಹಿತೆ, ಮಾರ್ಗಸೂಚಿ, ನಿಷೇಧಿತ ವಸ್ತುಗಳ ವಿವರಗಳನ್ನು ಕೆಇಎ ವೆಬ್ ಸೈಟ್ ನಲ್ಲಿ ಸೂಚಿಸಿದೆ. ಈ ಕುರಿತು ಸವಿವರ ಮಾಹಿತಿ ಈ ಕೆಳಗಿನಂತಿದೆ.

ಪುರುಷ ಅಭ್ಯರ್ಥಿಗಳ ವಸ್ತ್ರಸಂಹಿತೆ ಹೀಗಿದೆ

* ಕೋವಿಡ್ ನಿಯಮವನ್ನು ಪಾಲಿಸಲು ಅರೆ ಪಾರದರ್ಶಕದ ಸರ್ಜಿಕಲ್ ಮಾಸ್ಕ್ ಮಾತ್ರ ಧರಿಸಬೇಕು.
* ಎನ್‌ 95 ಹಾಗೂ ಕಾಟನ್ ಮಾಸ್ಕ್‌ಗಳಿಗೆ ಅವಕಾಶವಿಲ್ಲ.
* ತುಂಬು ತೋಳಿನ ಅಂಗಿಗಳಿಗೆ ಅವಕಾಶ ನೀಡುವುದಿಲ್ಲ.
* ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಬೇಕು.
* ಪುರುಷ ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು. ಪಾಕೆಟ್‌ಗಳಲ್ಲಿ ಜಿಪ್ ಗಳಿರುವ, ದೊಡ್ಡ ಬಟನ್‌ಗಳಿರು, ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳನ್ನು ಧರಿಸುವಂತಿಲ್ಲ.
* ಕುರ್ತಾ ಪೈಜಾಮ ಹಾಕಲು ಅನುಮತಿ ಇಲ್ಲ.
* ಶೂ ಹಾಕುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
* ಸ್ಯಾಂಡಲ್ ಅಥವಾ ಚಪ್ಪಲ್‌ಗಳನ್ನು ಧರಿಸಲು ಅವಕಾಶ.
* ಪುರುಷ ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸಬಾರದು, ಕಿವಿಯೋಲೆ, ಉಂಗುರಗಳು, ಕಡಗಗಳನ್ನು ಧರಿಸಿರಬಾರದು.


*ಮಹಿಳಾ ಅಭ್ಯರ್ಥಿಗಳಿಗೆ ಡ್ರೆಸ್‌ಕೋಡ್*

* ಕೋವಿಡ್ ನಿಯಮವನ್ನು ಪಾಲಿಸಲು ಅರೆ ಪಾರದರ್ಶಕದ ಸರ್ಜಿಕಲ್ ಮಾಸ್ಕ್ ಮಾತ್ರ ಧರಿಸಬೇಕು.
* ಎನ್‌ 95 ಹಾಗೂ ಕಾಟನ್ ಮಾಸ್ಕ್‌ಗಳಿಗೆ ಅವಕಾಶವಿಲ್ಲ.
* ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವಂತಿಲ್ಲ.
* ಅರ್ಧ ತೋಳುಗಳುಳ್ಳ ಬಟ್ಟೆಗಳಿಗೆ ಮಾತ್ರ ಅವಕಾಶ.
* ಎತ್ತರದ ಹಿಮ್ಮಡಿಯ ಶೂ ಮತ್ತು ಅಡಿಭಾಗ ಎತ್ತರ ಇರುವ ಶೂಗಳನ್ನು ಧರಿಸುವಂತಿಲ್ಲ ಮತ್ತು ಬದಲಿಗೆ ಸ್ಯಾಂಡಲ್, ಚಪ್ಪಲಿ ಬಳಸುವುದು.
* ಕಿವಿಯೋಲೆಗಳು, ಉಂಗುರಗಳು, ಪೆಂಡೆಂಟ್‌ಗಳು, ನೆಕ್ಲೇಸ್‌ಗಳು, ಬಳೆಗಳು ಇಂತಹ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ.


ಕೆಪಿಟಿಸಿಎಲ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಅಡ್ಮಿಟ್ ಕಾರ್ಡ್‌ ಪ್ರಕಟ., ಡೌನ್‌ಲೋಡ್‌ಗೆ ಲಿಂಕ್ ಇಲ್ಲಿದೆ
ಕೆಪಿಟಿಸಿಎಲ್ 2022ರ ನೇಮಕಾತಿ ಪರೀಕ್ಷೆಗೆ ನಿಷೇಧಿತ ವಸ್ತುಗಳ ಪಟ್ಟಿ
* ಮೊಬೈಲ್ ಫೋನ್, ಪೆನ್‌ಡ್ರೈವ್‌, ಇಯರ್‌ಫೋನ್‌, ಮೈಕ್ರೋಫೋನ್‌, ಬ್ಲೂಟೂತ್ ಮುಂತಾದ ಇಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ.
* ಪರೀಕ್ಷಾ ಹಾಲ್‌ನೊಳಗೆ ವಾಚ್ ಧರಿಸುವಂತಿಲ್ಲ.
* ಯಾವುದೇ ತಿನ್ನುವ ಪದಾರ್ಥಗಳನ್ನು ಪರೀಕ್ಷೆ ಹಾಲ್‌ನೊಳಗೆ ನಿಷೇಧಿಸಲಾಗಿದೆ.
* ಪೆನ್ಸಿಲ್, ಪೇಪರ್, ರಬ್ಬರ್, ಮಾಪಕಗಳು, ಕಂಪಾಸ್ ಬಾಕ್ಸ್‌ ಮತ್ತು ಲಾಗ್ ಟೇಬಲ್‌ಗಳನ್ನು ಪರೀಕ್ಷಾ ಕೇಂದ್ರದೊಳಗೆ ನಿಷೇಧಿಸಲಾಗಿದೆ.
- ವ್ಯಾಲೆಟ್‌ಗಳು, ಗಾಗಲ್ಸ್‌, ಬೆಲ್ಟ್‌ಗಳು, ಕ್ಯಾಪ್‌ಗಳು, ಪರಿಕರಗಳು, ಕ್ಯಾಮೆರಾ ಮತ್ತು ಆಭರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ಒಯ್ಯಲು ಅನುಮತಿಸಲಾಗುವುದಿಲ್ಲ.
ಪರೀಕ್ಷೆ ಕೇಂದ್ರದೊಳಗೆ ಕೇವಲ ಪ್ರವೇಶ ಪತ್ರ, ಸರ್ಕಾರದ ಅಧಿಕೃತ ಯಾವುದಾದರೂ ಐಡಿ ಕಾರ್ಡ್‌, ಕುಡಿಯುವ ನೀರಿನ ಬಾಟಲ್ (ಅದು ಪಾರದರ್ಶಕವಾಗಿರಬೇಕು, ಯಾವುದೇ ಲೇಬಲ್‌ಗಳನ್ನು ಹೊಂದಿರುವಹಾಗಿಲ್ಲ), ಪೆನ್‌ ಮಾತ್ರ ತೆಗೆದುಕೊಂಡು ಹಾಜರಾಗಬಹುದು.