ಬಾಗಲಕೋಟೆ: ಸಿದ್ದರಾಮಯ್ಯ ಬೆಂಗಾವಲು ವಾಹನದ ಹಿಂದೆ ಪರಿಹಾರ ಹಣ ಎಸೆದ ಮಹಿಳೆ

ಬಾಗಲಕೋಟೆ: ಮಹಿಳೆಯೋರ್ವರು ಪರಿಹಾರ ನೀಡಿರುವ ಹಣವನ್ನು ಮಾಜಿ ಸಿಎಂ ಸಿದ್ದರಾಮಯ್ಯನವರ ಕಾರಿನ ಬೆಂಗಾವಲು ವಾಹನದ ಹಿಂಭಾಗ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬಾದಾಮಿಯ ಕೇರೂರು ಪಟ್ಟಣದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಭೇಟಿಯಾಗಲು ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು‌. ಆಗ ನೀಡಿರುವ ಪರಿಹಾರ ಹಣವನ್ನು ಆಕ್ರೋಶಿತ ಮಹಿಳೆಯೋರ್ವರು ಸಿದ್ದರಾಮಯ್ಯರ ಬೆಂಗಾವಲು ವಾಹನದ ಹಿಂದೆ ಎಸೆದಿದ್ದಾರೆ. ಬಳಿಕ ಸಿದ್ದರಾಮಯ್ಯನವರು ಮಹಿಳೆಗೆ ಸಮಾಧಾನ ಮಾಡಲೆತ್ನಿಸಿದರೂ ಆಕೆ ಮಾಧ್ಯಮದ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲರೂ ಕೇವಲ ಸಂದರ್ಭ ಮತ ಕೇಳಲು ಬರುತ್ತಾರೆ ವಿನಃ ಅವರು ಯಾವುದೇ ಸಮಸ್ಯೆಗಳ ಬಗ್ಗೆ ಗಮನ ಹರಿಸಿಲ್ಲ. ಹಿಂದೂ ಮುಸ್ಲಿಂ ಅನ್ನದೆ ಎಲ್ಲರಿಗೂ ಸಮಾನರಾಗಿ ಕಾಣಬೇಕು. ಯಾವುದೇ ತಪ್ಪು ಮಾಡದಿದ್ದರೂ ವಿನಾ ಕಾರಣ ಹಲ್ಲೆ ಮಾಡಲಾಗಿದೆ ಎಂದು ಹಣ ಎಸೆದಿರುವ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.