ಉಡುಪಿ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ ಈ ಮಹಾತಾಯಿ
Thursday, July 7, 2022
ಉಡುಪಿ: ಇಲ್ಲಿನ ಸರಕಾರಿ ತಾಯಿ - ಮಕ್ಕಳ ಆಸ್ಪತ್ರೆಯಲ್ಲಿ ಅಂಕೋಲ ಮೂಲದ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಉತ್ತರ ಕನ್ನಡದ ಅಂಕೋಲ ಮೂಲದ ಸಿದ್ಧಿ ಜನಾಂಗದ ಈ 27 ವರ್ಷದ ಮಹಿಳೆ ಉಡುಪಿಯ ಕೂಸಮ್ಮ ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ - ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಲ್ಲಿನ ವೈದ್ಯರ ತಂಡ ಈ ಮಹಿಳೆಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದೆ. ಆಕೆಗೆ ಎರಡು ಗಂಡು ಮಕ್ಕಳು, ಒಂದು ಹೆಣ್ಣು ಮಗು ಸೇತಿದಂತೆ ತ್ರಿವಳಿ ಮಕ್ಕಳು ಜನಿಸಿದೆ.
ಡಾ.ಕವೀಶ್ ಭಟ್, ಡಾ.ರಜನಿ ಕಾರಂತ್, ಡಾ.ಸೂರ್ಯನಾರಾಯಣ, ಡಾ.ಗಣಪತಿ ಹೆಗಡೆ ಹಾಗೂ ಡಾ.ಮಹಾದೇವ ಭಟ್ ವೈದ್ಯರ ತಂಡ ಈ ಮಹಿಳೆಗೆ ಹೆರಿಗೆ ಮಾಡಿಸಿದೆ.