-->
ಮಾಜಿ ಪತ್ನಿ ಸಮಂತಾಗೆ ಪರೋಕ್ಷವಾಗಿ 'ಥ್ಯಾಂಕ್ಯೂ ಯೂ' ಹೇಳಿದ ನಾಗಚೈತನ್ಯ: ಪೋಸ್ಟ್ ವೈರಲ್

ಮಾಜಿ ಪತ್ನಿ ಸಮಂತಾಗೆ ಪರೋಕ್ಷವಾಗಿ 'ಥ್ಯಾಂಕ್ಯೂ ಯೂ' ಹೇಳಿದ ನಾಗಚೈತನ್ಯ: ಪೋಸ್ಟ್ ವೈರಲ್

ಹೈದರಾಬಾದ್: 'ಲವ್‌ಸ್ಟೋರಿ’ ಸಿನಿಮಾದ ಯಶಸ್ಸಿನ ಬಳಿಕ ಟಾಲಿವುಡ್ ಸ್ಟಾರ್ ನಾಗಚೈತನ್ಯ ಸದ್ಯ `ಥ್ಯಾಂಕ್‌ ಯೂ’ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದೀಗ ನಾಗಚೈತನ್ಯ ಸೋಶಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಮೂಲಕ ಸಮಂತಾ ಮೇಲೆ ಇನ್ನೂ ಅವರಿಗೆ ಪ್ರೀತಿಯಿದೆ ಎಂಬ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಸದ್ಯ ಶೇರ್ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ರಿಲೀಸ್‌ ಆಗಲು ತಯಾರಾಗಿರುವ ನಾಗಚೈತನ್ಯ ಹೊಸ ಸಿನಿಮಾದ ಹೆಸರು `ಥ್ಯಾಂಕ್ ಯೂ’. ಆದ್ದರಿಂದ ಅವರು ತಮ್ಮ ಜೀವನದಲ್ಲಿ `ಥ್ಯಾಂಕ್ ಯೂ’ ಹೇಳಲು ಬಯಸುವ ಮೂವರ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಮೂರು ಫೋಟೊಗಳಲ್ಲಿ ಒಂದು ಪರೋಕ್ಷವಾಗಿ ನಟಿ ಸಮಂತಾರೆಡೆಗೆ ಬೆರಳು ತೋರಿಸುತ್ತಿದೆ. ಆ ಫೋಟೊವನ್ನು ನೋಡಿ ನಾಗಚೈತನ್ಯ ಇನ್ನೂ ಸಮಂತಾರನ್ನು ಮರೆತಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ನಾಗಚೈತನ್ಯ ಶೇರ್ ಮಾಡಿರುವ ಮೊದಲ ಫೋಟೋ ತಾಯಿಯೊಂದಿಗೆ, ಎರಡನೇ ಫೋಟೋ ತಂದೆಯೊಂದಿಗೆ ಮತ್ತು ಕಡೆಯ ಫೋಟೋ ತಮ್ಮ ನಾಯಿಯೊಂದಿಗಿರುವ ಫೋಟೋ ಹಾಕಿ ಥ್ಯಾಂಕ್ ಯೂ ಅಂದಿದ್ದಾರೆ. 

ನಾಯಿಯೊಂದಿಗಿರುವ ಫೋಟೋ ಮಾಜಿ ಪತ್ನಿ ಸಮಂತಾಗೆ ಸಂಬಂಧಿಸಿದ್ದು. ಇಬ್ಬರೂ ತಮ್ಮ ಪ್ರೀತಿಯ ಪ್ರತೀಕವಾಗಿ ಇಟ್ಟುಕೊಂಡಿದ್ದ ಹ್ಯಾಶ್ ಫೋಟೊವನ್ನು ನಾಗಚೈತನ್ಯ ಶೇರ್ ಮಾಡಿದ್ದಾರೆ. 

ಹ್ಯಾಶ್, ಇದು ನಾಗಚೈತನ್ಯ ಹಾಗೂ ಸಮಂತಾ ಪ್ರೀತಿಯ ಸಂಕೇತಕ್ಕೆಂದು ಇದ್ದ ಅವರ ಪ್ರೀತಿಯ ಶ್ವಾನ. ಅದೇ ಫೋಟೊವನ್ನು ನಾಗಚೈತನ್ಯ ಹಂಚಿಕೊಂಡಿದ್ದು, ಪರೋಕ್ಷವಾಗಿ ನಾಗಚೈತನ್ಯ ಸಮಂತಾಗೆ ಧನ್ಯವಾದಗಳನ್ನು ಹೇಳಿದ್ದಾರೆ. ಹ್ಯಾಶ್ ಹೇಗೆ ಪ್ರೀತಿ ಮಾಡಬೇಕು ಎನ್ನುವ ಭಾವ ಮೂಡಿಸಿದ್ದು ನೀನು, ಮನುಷ್ಯನಾಗಿಯೇ ಇರುವಂತೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article