-->
ಮಂಗಳೂರು: ಕುಡ್ಲಕ್ಕೆ ಬಂದ ಬಾಲಿವುಡ್ ನಟ ಸೋನು ಸೂದ್

ಮಂಗಳೂರು: ಕುಡ್ಲಕ್ಕೆ ಬಂದ ಬಾಲಿವುಡ್ ನಟ ಸೋನು ಸೂದ್

ಮಂಗಳೂರು: ಬಾಲಿವುಡ್ ನಟ ಸೋನು ಸೂದ್ ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಮುಂಬೈನಿಂದ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಸಾಮಾಜಿಕ ಕಾರ್ಯಕರ್ತೆ ಹೀಲ್ಡಾ ರಾಯಪ್ಪನ್ ಸ್ವಾಗತಿಸಿದರು.  







ನಟನಾಗಿ ಮಾತ್ರವಲ್ಲ ರಿಯಲ್ ಹೀರೋವಾಗಿ ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವ ಮೂಲಕ ದೇಶಾದ್ಯಂತ ಸೋನು ಸೂದ್ ಹೆಸರುವಾಸಿಯಾಗಿದ್ದಾರೆ‌‌. ಕೋವಿಡ್ ಕಾಲದಲ್ಲೂ ಅದೆಷ್ಟೋ ವಲಸೆ ಕಾರ್ಮಿಕರಿಗೆ ನೆರವಾಗಿದ್ದಾರೆ‌. ಅಲ್ಲದೆ ಆಕ್ಸಿಜನ್ ಗಳನ್ನು ಒದಗಿಸಿ ಎಷ್ಟೋ ಪ್ರಾಣ ರಕ್ಷಣೆಗೆ ಕಾರಣರಾಗಿದ್ದರು‌. ಇಂದು ನಗರದ ಸಾಮಾಜಿಕ ಚಟುವಟಿಕಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಮಂಗಳೂರಿಗೆ ಆಗಮಿಸಿದ್ದಾರೆ.

Ads on article

Advertise in articles 1

advertising articles 2

Advertise under the article