-->

ಭಾರತ ಸಹಿತ 'ಜಾಗತಿಕ ಬೆಳವಣಿಗೆ ದರ' ಕುಸಿತ: ಆರ್ಥಿಕ ಹಿಂಜರಿತದ ಎಚ್ಚರಿಕೆ ನೀಡಿದ IMF

ಭಾರತ ಸಹಿತ 'ಜಾಗತಿಕ ಬೆಳವಣಿಗೆ ದರ' ಕುಸಿತ: ಆರ್ಥಿಕ ಹಿಂಜರಿತದ ಎಚ್ಚರಿಕೆ ನೀಡಿದ IMF

ಭಾರತ ಸಹಿತ 'ಜಾಗತಿಕ ಬೆಳವಣಿಗೆ ದರ' ಕುಸಿತ: ಆರ್ಥಿಕ ಹಿಂಜರಿತದ ಎಚ್ಚರಿಕೆ ನೀಡಿದ IMF





ಜುಲೈ 26ರಂದು ಬಿಡುಗಡೆ ಮಾಡಿದ ವರದಿಯಲ್ಲಿ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಮತ್ತೆ ಜಾಗತಿಕ ಬೆಳವಣಿಗೆ ದರವನ್ನು ತಗ್ಗಿಸಿದೆ. ಹೆಚ್ಚು ಹಣದುಬ್ಬರ ಇರುವ ಕಾರಣದಿಂದಾಗಿ ಹಾಗೂ ಉಕ್ರೇನ್ ಯುದ್ಧದ ಮುಂದುವರಿದಿರುವ ಕಾರಣ ಜಾಗತಿಕ ಬೆಳವಣಿಗೆ ದರವನ್ನು ತಗ್ಗಿಸಿದೆ.



ವಾಸ್ತವವಾಗಿ, ಜಾಗತಿಕ GDP ಬೆಳವಣಿಗೆ ಏಪ್ರಿಲ್‌ನಲ್ಲಿ ನೀಡಲಾದ ಶೇ. 3.6ರ ಮುನ್ಸೂಚನೆಯಿಂದ 2022ರಲ್ಲಿ ಶೇಕಡ 3.2ಕ್ಕೆ ತಗ್ಗಿದೆ. ವಿಶ್ವ ಆರ್ಥಿಕ ದೃಷ್ಟಿಕೋನದ ಅಪ್‌ಡೇಟ್ ವರದಿಯಲ್ಲಿ IMF ತಿಳಿಸಿದೆ.



ರಷ್ಯಾ, ಚೀನಾದಲ್ಲಿ ಉಂಟಾದ ಆರ್ಥಿಕ ಕುಸಿತದ ಪರಿಣಾಮ ಎರಡನೇ ತ್ರೈಮಾಸಿಕದಲ್ಲಿ GDP ಕುಸಿದಿದೆ ಎಂದು ಅದು ಹೇಳಿದೆ.


ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ IMF ಹೇಳಿದ್ದೇನು..?

ಭಾರತದಲ್ಲೂ ವಿತ್ತೀಯ ನೀತಿಯ ಪರಿಣಾಮವನ್ನು ಕೂಡಾ ಐಎಂಎಫ್ ಉಲ್ಲೇಖ ಮಾಡಿದೆ. 2023 ರ ಬೆಳವಣಿಗೆಯ ಮುನ್ಸೂಚನೆಯನ್ನು ಏಪ್ರಿಲ್ ಅಂದಾಜು ಶೇಕಡ 3.6ರಿಂದ ಶೇಕಡ 2.9ಕ್ಕೆ ಕಡಿತಗೊಳಿಸಿದೆ. 


ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ 2020 ರಲ್ಲಿ ಶೇಕಡ 3.1ಕ್ಕೆ ಇಳಿದಿದ್ದ ಜಾಗತಿಕ ಉತ್ಪಾದನಾ ದರವು ಬಳಿಕ 2021 ರಲ್ಲಿ ಶೇಕಡ 6.1ಕ್ಕೆ ಏರಿತ್ತು. "ಏಪ್ರಿಲ್‌ನಿಂದ ಬೆಳವಣಿಗೆಯು ಕತ್ತಲೆಯಲ್ಲಿ ಆವರಿಸಿದೆ.



ಕಳೆದ ಎರಡು ವರ್ಷಗಳ ನಂತರ ಜಗತ್ತು ಶೀಘ್ರದಲ್ಲೇ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ತುತ್ತಾಗುವ ಸಾಧ್ಯತೆ ಇದೆ," ಎಂದು IMF ಮುಖ್ಯ ಅರ್ಥಶಾಸ್ತ್ರಜ್ಞರಾದ ಪಿಯರೆ-ಒಲಿವಿಯರ್ ಗೌರಿಂಚಾಸ್ ತಿಳಿಸಿದ್ದಾರೆ.



ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತಕ್ಕೆ 9.5 ಪ್ರತಿಶತ ಜಿಡಿಪಿ ಬೆಳವಣಿಗೆಯನ್ನು ಯೋಜಿಸಿದ್ದ ವಾಷಿಂಗ್ಟನ್ ಮೂಲದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು ಮುಂದಿನ ಹಣಕಾಸು ವರ್ಷ 2023 (ಏಪ್ರಿಲ್ 2022 ರಿಂದ ಮಾರ್ಚ್ 2023) ಕ್ಕೆ ಈ ಹಿಂದೆ ಮುನ್ಸೂಚನೆ ನೀಡಿತ್ತು. 2022-2023ರಲ್ಲಿ ಇದು ಶೇಕಡ 7.1ರಲ್ಲಿ ಇರಲಿದೆ ಎಂದು ಸೂಚನೆ ನೀಡಿದೆ.



ಉಕ್ರೇನ್ ರಷ್ಯಾ ಯುದ್ಧದ ಉಲ್ಲೇಖ

IMF ತನ್ನ ಮುನ್ಸೂಚನೆಯಲ್ಲಿ, ಉಕ್ರೇನ್ - ರಷ್ಯಾ ಯುದ್ಧದ ಪರಿಣಾಮವನ್ನೂ ಉಲ್ಲೇಖಿಸಿದೆ. ಶಕ್ತಿ ಮತ್ತು ಆಹಾರದ ಬೆಲೆಗಳು ಹೆಚ್ಚಾಗುತ್ತವೆ. ಹಣದುಬ್ಬರ ಉಂಟಾಗುತ್ತದೆ. ಇದರಿಂದಾಗಿ ವಿತ್ತೀಯ ನೀತಿ ಬಿಗಿಯಾಗುತ್ತದೆ ಎಂದು ಐಎಂಎಫ್ ಹೇಳಿತ್ತು. 



ಜಾಗತಿಕ ಬೆಳವಣಿಗೆಯು 1970 ರಿಂದ ಕೇವಲ ಐದು ಬಾರಿ ಶೇಕಡ 2ಕ್ಕಿಂತ ಕಡಿಮೆಯಾಗಿದೆ. ಕೋವಿಡ್ ಸಂದರ್ಭದಲ್ಲಿಯೂ ಜಾಗತಿಕ ಬೆಳವಣಿಗೆ ಕುಸಿದಿದೆ.

Ads on article

Advertise in articles 1

advertising articles 2

Advertise under the article