ಬಟ್ಟೆ ಬಿಚ್ಚುವ ನಟಿಯರಿಗಿಂತ ತಾನೇನೂ ಕಡಿಮೆಯಿಲ್ಲವೆಂದು ಸಂಪೂರ್ಣ ನಗ್ನರಾದ ರಣವೀರ್ ಸಿಂಗ್!

ಮಂಗಳೂರು: ಟ್ರೋಲ್ ಆದಲ್ಲಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತೇವೆ  ಎನ್ನುವ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಕೆಲ ನಟಿಯರು ಕನಿಷ್ಠ ಉಡುಗೆ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ ಕೊಡುತ್ತಾರೆ. ಆದರೆ ಇದೀಗ ಈ ನಟಿಯರಿಗಿಂತ ತಾನೇನೂ ಕಡಿಮೆಯಿಲ್ಲವೆಂಬಂತೆ, ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ನಟ ರಣಬೀರ್ ಸಿಂಗ್ ಮಾಡಿಸಿರುವ ಫೋಟೋಶೂಟ್ ಜಾಲತಾಣದಲ್ಲಿ ಸಂಚಲವನ್ನೇ ಸೃಷ್ಟಿಸಿದೆ.

 ಇದಕ್ಕೆ ಕಾರಣವೇನೆಂದರೆ ರಣಬೀರ್ ಸಿಂಗ್ ಸಂಪೂರ್ಣ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸದಾ ಚಿತ್ರ ವಿಚಿತ್ರ ಉಡುಗೆ ತೊಡುಗೆಗಳನ್ನು ತೊಟ್ಟು ಸಕತ್ ಫೇಮಸ್ ಆಗಿರುವ ರಣಬೀರ್ ಸಿಂಗ್, ತಾನು ಯಾವುದೇ ಬಟ್ಟೆ ಇಲ್ಲದೆಯೂ ಚೆನ್ನಾಗಿ ಕಾಣಿಸಬಲ್ಲೆ ಎಂದು ಸಾಬೀತು ಪಡಿಸಲು ಹೋದಂತಿದೆ.


ಮ್ಯಾಗಝಿನ್ ಒಂದರ ಮುಖಪುಟಕ್ಕಾಗಿ ಸಂಪೂರ್ಣ ನಗ್ನರಾಗಿ ರಣಬೀರ್ ಸಿಂಗ್ ಕ್ಯಾಮರಾಕ್ಕೆ ಪೋಸ್ ನೀಡಿದ್ದಾರೆ. ಇದನ್ನು ನೋಡಿ ಕೆಲ ನೆಟ್ಟಿಗರು ಗರಂ ಆಗಿದ್ದಾರೆ. ರಣಬೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆಯವರಿಗೆ ಅಭಿಮಾನಿಗಳು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ಪತಿಗೆ ಸ್ವಲ್ಪ ಬುದ್ಧಿವಾದ ಹೇಳಿ ಎಂದಿದ್ದಾರೆ. ಆದರೆ ದೀಪಿಕಾ ಸದ್ಯ ಮೌನ ತಾಳಿದ್ದಾರೆ. 

ಮ್ಯಾಗಝಿನ್‌ಗೆ ಈ ರೀತಿಯ ಪೋಸ್ ನೀಡಿದ ಬಳಿಕ ಸಂದರ್ಶನದಲ್ಲಿ ಮಾತನಾಡಿದ ನಟ ರಣಬೀರ್ ಸಿಂಗ್, ನಟಿಸುವಾಗ ನನಗೆ ಬೆತ್ತಲಾಗುವುದೆಂದರೆ ನನಗೆ ಬಹಳ ಇಷ್ಟ. ಇದು ಸುಲಭ ಕೂಡ. ಆದರೆ ನೋಡುಗರು ನನ್ನನ್ನು ನೋಡಿ ಮುಜುಗರ ಪಡುತ್ತಾರೆ ಎಂದು ಬಟ್ಟೆ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ. ಇವರ ಈ ಫೋಟೋ ಹಾಗೂ ಹೇಳಿಕೆಗೆ ಭಾರಿ ಚರ್ಚೆ ಶುರುವಾಗಿದೆ.