-->
MangaIuru: ಮರವೂರು ಸೇತುವೆಯಲ್ಲಿ ಬೈಕ್ ಬಿಟ್ಟು ವ್ಯಕ್ತಿ ನಾಪತ್ತೆ

MangaIuru: ಮರವೂರು ಸೇತುವೆಯಲ್ಲಿ ಬೈಕ್ ಬಿಟ್ಟು ವ್ಯಕ್ತಿ ನಾಪತ್ತೆ

ಮಂಗಳೂರು: ನಗರದ ಮರವೂರು ಸೇತುವೆಯಲ್ಲಿ ಬೈಕ್ ಬಿಟ್ಟು ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ನಗರದ ಕದ್ರಿಯ ವ್ಯಾಸ ನಗರ ನಿವಾಸಿ ವಿವೇಕ್ ಪ್ರಭು(42) ನಾಪತ್ತೆಯಾದವರು.


ಮಂಗಳೂರಿನ ಫಳ್ನೀರ್ ನ ಪೆಟ್ರೋಲ್ ಬಂಕ್ ವೊಂದರಲ್ಲಿ ವಿವೇಕ್ ಪ್ರಭು ಕೆಲಸ ನಿರ್ವಹಿಸುತ್ತಿದ್ದರು. ವಿವೇಕ್ ಪ್ರಭು ಮಂಗಳವಾರ ಮಧ್ಯರಾತ್ರಿ ಯಾವುದೋ ಕಾರಣಕ್ಕೆ ಕಲಹ ಉಂಟಾಗಿ ಮನೆಯಿಂದ ಹೊರ ಹೋಗಿದ್ದರು‌. ಆದರೆ ಬುಧವಾರ ಬೆಳಗ್ಗೆ ಅವರ ಬೈಕ್ ಮರವೂರು ಸೇತುವೆ ಮೇಲೆ ಇರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಮಂಗಳೂರು ಪೂರ್ವ ಠಾಣೆಯಲ್ಲಿ ವಿವೇಕ್ ಅವರ ಪತ್ನಿ ನೀಡಿರುವ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article