Health Tips : ನಿಮಗೆ ಕ್ಯಾಲ್ಸಿಯಂ ಕೊರತೆ ಇದೆಯೇ..?: ಗೊತ್ತಾಗುವುದು ಹೇಗೆ...? ಕೊರತೆಯಿಂದ ಪರಿಣಾಮಗಳೇನು...?
ನಿಮಗೆ ಕ್ಯಾಲ್ಸಿಯಂ ಕೊರತೆ ಇದೆಯೇ..?: ಗೊತ್ತಾಗುವುದು ಹೇಗೆ...? ಕೊರತೆಯಿಂದ ಪರಿಣಾಮಗಳೇನು...?
ನಮ್ಮ ದೇಹವು ಸ್ವಂತವಾಗಿ ಉತ್ಪಾದಿಸಲು ಸಾಧ್ಯವಾಗದ ಅಗತ್ಯವಾದ ಖನಿಜವೇ ಕ್ಯಾಲ್ಸಿಯಂ. ಅದಕ್ಕಾಗಿ ದೇಹವು ಇದನ್ನು ಸಾಮಾನ್ಯವಾಗಿ ಆಹಾರದ ಮೂಲಗಳ ಮೂಲಕ ಪಡೆಯುತ್ತದೆ.
Calcium ಕ್ಯಾಲ್ಸಿಯಂ ಕೊರತೆ ಇತ್ತೀಚಿನ ದಿನಗಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಒಂದು ಲೋಟ ಹಾಲು ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ನೀಡುತ್ತದೆ. ಇದು ಮೂಳೆಯನ್ನು ದೃಢಗೊಳಿಸುತ್ತದೆ. ಹಾಗೂ ಆರೋಗ್ಯವನ್ನೂ ಸುಧಾರಿಸುತ್ತದೆ.
ನಿಯಮಿತವಾದ ಹಾಲು ಸೇವನೆ ದೇಹದಲ್ಲಿ ರಕ್ತದೊತ್ತಡ (Blood Pressure), ಹೃದಯದ ಆರೋಗ್ಯ, ದೇಹದ ತೂಕ ಮತ್ತು ಕ್ಯಾನ್ಸರ್ (Cancer) ತಡೆಗಟ್ಟುವಿಕೆಯ ಮೇಲೆ ಪ್ರಭಾವ ಬೀರುತ್ತದೆ.
ಸುಮಾರು 19-50 ವರ್ಷ ವಯಸ್ಸಿನ ವಯಸ್ಕರು ಪ್ರತಿದಿನಕ್ಕೆ ಸರಾಸರಿ 1,000 ಮಿಲಿಗ್ರಾಂ ಕ್ಯಾಲ್ಸಿಯಂ ಹೊಂದಿರಬೇಕು ಮತ್ತು 51-70 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕ ಪುರುಷರು ದಿನಕ್ಕೆ 1,200 ಮಿಲಿಗ್ರಾಂಗಳನ್ನು ಹೊಂದಿರಬೇಕು. ಈ ಕ್ಯಾಲ್ಸಿಯಂ ಪೂರೈಸಲು ವಿಫಲವಾದರೆ, ದೇಹವು ನಿಶ್ಶಕ್ತಿಯಿಂದ ಬಳಲುತ್ತದೆ.
ನಮ್ಮ ಆಹಾರದಲ್ಲಿ Calcium ಪೂರೈಸುವ ಘಟಕಗಳು ಇಲ್ಲದೇ ಇದ್ದರೆ ಅದರ ಕೊರತೆ ಉಂಟಾಗುತ್ತದೆ. ಹಾಗಾಗಿ, ನಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸುವಲ್ಲಿ ನಾವು ವಿಫಲರಾಗುತ್ತೇವೆ.
ಉಗುರು ಸರಿಯಾಗಿ ಬೆಳೆಯದಿದ್ದರೆ ಕ್ಯಾಲ್ಸಿಯಂ ಕೊರತೆ ಕಾರಣ
ನಿಮ್ಮ ಕಾಲು ಮತ್ತು ಕೈಗಳ ಉಗುರು ದುರ್ಬಲವಾಗಿದ್ದರೆ ಅಥವಾ ಸುಲಭದಲ್ಲಿ ಕಟ್ ಮಾಡಬಹುದು ಎಂದಾದರೆ, ಆಗ ನೀವು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದೀರಿ ಎಂದು ಭಾವಿಸಬಹುದು. ನಿಮ್ಮ ಉಗುರುಗಳು ಸರಿಯಾಗಿ ಬೆಳೆಯದಿದ್ದರೂ ಕ್ಯಾಲ್ಸಿಯಂ ಕೊರತೆ ಕಾರಣ.
ಹಾಗಾಗಿ, ನೀವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಸಾಧ್ಯವಾದಷ್ಟು ಡೈರಿ ಉತ್ಪನ್ನಗಳನ್ನು, ಹಸಿರು ತರಕಾರಿ, ಕಾಯಿ ಪಲ್ಯೆಗಳನ್ನು, ಅಂಜೂರ ಮುಂತಾದ ಕ್ಯಾಲ್ಶಿಯಂ ಭರಿತ ಹಣ್ಣುಗಳನ್ನು ಸೇವಿಸಬೇಕು.
ಮಸಲ್ ಕ್ಯಾಚ್, ಸ್ನಾಯು ಸೆಳೆತ- ಕ್ಯಾಲ್ಸಿಯಂ ಕೊರತೆಯ ಆರಂಭಿಕ ಲಕ್ಷಣ
ಮಸಲ್ ಕ್ಯಾಚ್ ಆಗುವುದು, ಸ್ನಾಯು ಸೆಳೆತ ಕ್ಯಾಲ್ಸಿಯಂ ಕೊರತೆಯ ಒಂದು ಸೂಚನೆ. ಸ್ನಾಯು ಸೆಳೆತ ಅಪಾಯಕಾರಿಯಾಗದಿರಬಹುದು. ಆದರೆ ನೀವು ಒಂದು ದಿನದಲ್ಲಿ ಕೆಲವು ಸೆಳೆತಗಳನ್ನು ಅನುಭವಿಸುತ್ತಿದ್ದರೆ, ಕ್ಯಾಲ್ಸಿಯಂ ಸಂಬಂಧಿತ ಕೊರತೆಯಾಗಿದೆ ಎಂಬುದರ ದಟ್ಟ ಮುನ್ಸೂಚನೆ.
Calcium ಕ್ಯಾಲ್ಸಿಯಂ ಕೊರತೆ ಸ್ನಾಯುವಿನ ಮೃದುತ್ವ, ಸಂಕೋಚನ ಮತ್ತು ಒಟ್ಟಾರೆ ಅಸ್ವಸ್ಥತೆಗೆ ದಾರಿ ಮಾಡಿಕೊಡುತ್ತದೆ. ಈ ಉಪಯುಕ್ತ ಖನಿಜವು ನಿಮ್ಮ ಸ್ನಾಯುಗಳನ್ನು ಚಲಿಸಲು ಸಹಾಯ ಮಾಡುತ್ತದೆ.
Calcium ಕೊರತೆ ಹಲ್ಲುಗಳ ಮೇಲೂ ಪರಿಣಾಮ ಬೀರುತ್ತವೆ
ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ನಮ್ಮ ಹಲ್ಲುಗಳ ಮೇಲೂ ಪರಿಣಾಮ ಬೀರುತ್ತವೆ. ಒಂದೋ ಹಲ್ಲುಗಳು ಕೊಳೆಯಲು ಪ್ರಾರಂಭಿಸುತ್ತವೆ, ಇಲ್ಲವೇ ಅವು ದಿನದಿಂದ ದಿನಕ್ಕೆ ದುರ್ಬಲವಾಗುತ್ತವೆ. ದಂತ ಕುಳಿಗಳು ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು. ಕೆಟ್ಟ ಉಸಿರಾಟದ ಸಮಸ್ಯೆ ನಿಮಗೆ ಆಗುತ್ತಿದ್ದರೆ ಅದೂ ಕ್ಯಾಲ್ಶಿಯಂ ಕೊರತೆಯ ಕಾರಣ. ಆಗ ವೈದ್ಯರಲ್ಲಿ ಕ್ಯಾಲ್ಸಿಯಂ ಕೊರತೆ ಬಗ್ಗೆ ವಿಚಾರಿಸಿ.
ರಕ್ತದೊತ್ತಡ ಮಟ್ಟ ನಿಯಂತ್ರಿಸಲು ಕ್ಯಾಲ್ಸಿಯಂ ಸಹಕಾರಿ
ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಕ್ಯಾಲ್ಸಿಯಂ ಸೇವನೆ ಅದನ್ನು ನಿಯಂತ್ರಿಸುತ್ತದೆ. ರಕ್ತನಾಳಗಳನ್ನು ಸಂಕುಚಿತಗೊಳಿಸುವ ವಿಕಸಿಸುವ ಕೆಲಸವನ್ನು ಮಾಡಲು ಕ್ಯಾಲ್ಸಿಯಂ ಸಹಾಯ ಮಾಡುತ್ತದೆ.
ದೇಹದಲ್ಲಿ ಸೋಡಿಯಂ ಸಮತೋಲನವನ್ನು ಕಾಪಾಡಿಕೊಳ್ಳಲು ಕಡಿಮೆ ಕ್ಯಾಲ್ಸಿಯಂ ಮಟ್ಟಗಳು ಸಹಾಯ ಮಾಡುತ್ತದೆ. ಜೊತೆಗೆ ರಕ್ತದೊತ್ತಡ ನಿಯಂತ್ರಿಸಲೂ ಸಹಾಯ ಮಾಡುತ್ತದೆ.
ನಿದ್ರಾಹೀನತೆ: ಕ್ಯಾಲ್ಸಿಯಂ ಮೆಲಟೋನಿನ್ ಬಿಡುಗಡೆಗೆ ಕಾರಣವಾಗುತ್ತದೆ
ನಿದ್ರಾಹೀನತೆ: ಕ್ಯಾಲ್ಸಿಯಂ 'ಮೆಲಟೋನಿನ್' ಬಿಡುಗಡೆಗೆ ಕಾರಣವಾಗುತ್ತದೆ. ಇದು ಉತ್ತಮ ನಿದ್ರೆಗೆ ಅಗತ್ಯವಾಗಿರುತ್ತದೆ. ನೀವು ಕ್ಯಾಲ್ಸಿಯಂ ಕೊರತೆಯನ್ನು ಹೊಂದಿದ್ದರೆ, ದೇಹವು ಅಗತ್ಯವಾದ ಮೆಲಟೋನಿನ್ ಪ್ರಮಾಣವನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ, ರಾತ್ರಿಯಿಡೀ ನಿಮ್ಮನ್ನು ಪ್ರಕ್ಷುಬ್ಧಗೊಳಿಸುತ್ತದೆ.
ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಕಾರಣ
ಸುಲಭವಾಗಿ ಮೂಳೆಗಳ ಮುರಿತವಾಗುವುದು ಖನಿಜಾಂಶದ ಕೊರತೆಯಿಂದ... ಕೆಲವೊಮ್ಮೆ ಇವು ರಿಕೆಟ್‌ಗಳು ಮತ್ತು ಆಸ್ಟಿಯೊಪೊರೋಸಿಸ್‌ನಂತಹ ತೀವ್ರ ಅಸ್ವಸ್ಥತೆಗೂ ದಾರಿ ಮಾಡಿಕೊಡಬಲ್ಲದು. Calcium ಶೇ. 95ರಷ್ಟು ಮೂಳೆಗಳಲ್ಲಿ ಶೇಖರವಾಗುತ್ತವೆ. ಇನ್ನುಳಿದವು ರಕ್ತದ ಹರಿವಿನಲ್ಲಿ ಇರುತ್ತದೆ. ಹಾಗಾಗಿ, ಪ್ರತಿದಿನ ಸಾಕಷ್ಟು ಕ್ಯಾಲ್ಸಿಯಂಯುಕ್ತ ಆಹಾರಗಳನ್ನು ಸೇವಿಸಿ... ಅದಕ್ಕೆ ಹೆಚ್ಚಿನ ಗಮನ ನೀಡಿ...