-->

ಸಿಹಿ ಸುದ್ದಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ !

ಸಿಹಿ ಸುದ್ದಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ !

ಸಿಹಿ ಸುದ್ದಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ





ಕಳೆದ ತಿಂಗಳು ಕೂಡಾ ವಾಣಿಜ್ಯ ಸಿಲಿಂಡರ್ ಮೇಲಿನ ಬೆಲೆಯಲ್ಲಿ ಕಡಿತ ಮಾಡಲಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ರೂ. 135 ಇಳಿಕೆ ಆಗಿತ್ತು.


ಕಮರ್ಷಿಯಲ್ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಬೆಲೆಯಲ್ಲಿ ಇಳಿಮುಖ ಕಂಡಿದೆ. ಈ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ದೊರೆತಿದೆ. ಜುಲೈ 1ರಂದು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ರೂ. 198 ಕಡಿತ ಮಾಡಲಾಗಿದೆ.


ಕೊಲ್ಕತಾದಲ್ಲಿ ಕಮರ್ಷಿಯಲ್ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಬೆಲೆ ರೂ 182ರಷ್ಟು ಇಳಿಕೆ ಆಗಿದೆ. ಮುಂಬೈನಲ್ಲಿ ರೂ. 190.50ರಷ್ಟು ಇಳಿಕೆಯಾದರೆ, ಚೆನ್ನೈನಲ್ಲಿ ರೂ. 187ರಷ್ಟು ಇಳಿಕೆಯಾಗಿದೆ.


ಇಂಡಿಯನ್ ಆಯಿಲ್ ಕೂಡಾ ಕಮರ್ಷಿಯಲ್ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಮೇ 19ರಂದು ಗೃಹ ಬಳಕೆಯ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದೆ.


ಜೂನ್ ತಿಂಗಳಿನಲ್ಲೂ ಕಮರ್ಷಿಯಲ್ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. ಸುಮಾರು ರೂ. 135 ಇಳಿಕೆಯಿಂದ ಗ್ರಾಹಕರಿಗೂ ಸಂತಸವಾಗಿತ್ತು.


ಡೊಮೆಸ್ಟಿಕ್ ಗ್ಯಾಸ್ ರೇಟ್ ಬದಲಾಗಿಲ್ಲ


ಮನೆ ಬಳಕೆಯ LPG ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜೂನ್‌ನಲ್ಲಿ ದೆಹಲಿಯಲ್ಲಿ ಈ ಬೆಲೆಯು ರೂ. 1,003ಕ್ಕೆ ಏರಿಕೆಯಾಗಿದೆ. ಈ ಮೂಲಕ ಒಂದು ತಿಂಗಳಲ್ಲೇ ಎರಡು ಬಾರಿ ಮನೆ ಬಳಕೆಯ LPG ದರ ಹೆಚ್ಚಳವಾಗಿದೆ. ಸಿಲಿಂಡರ್‌ಗೆ ಸುಮಾರು ರೂಪಾಯಿ 53.50ರಷ್ಟು ಹೆಚ್ಚಳವಾಗಿದೆ.

ದೇಶದ ಹಲವಾರು ಪ್ರಮುಖ ನಗರಗಳಲ್ಲಿ LPG ದರ ಸಾವಿರದ ಗಡಿ ದಾಟಿದೆ. ಆದರೆ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಲೆ ಸ್ಥಿರವಾಗಿ ಮುಂದುವರಿದಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article