ಬಾಂಗ್ಲಾದೇಶದಲ್ಲಿ ಕೊಲೆ ಎಸಗಿ ಬೆಂಗಳೂರಿನಲ್ಲಿ ಅರೆಸ್ಟ್: ಈತನಿಗೆ ಅಲ್ ಖೈದಾ ಲಿಂಕ್ ಶಂಕೆ!
Friday, July 8, 2022
ಬೆಂಗಳೂರು: ಬಾಂಗ್ಲಾದೇಶದಲ್ಲಿ ಕೊಲೆಗೈದು ಪರಾರಿಯಾಗಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನೆಲೆಸಿರುವ ಆರೋಪಿಯನ್ನು ಬಾಂಗ್ಲಾ ಪೊಲೀಸರು ಬಂಧಿಸಿದ್ದಾರೆ.
ಫೈಝಲ್ ಅಹ್ಮದ್ ಬಂಧಿತ ಆರೋಪಿ. ಈತನಿಗೆ ಉಗ್ರ ಸಂಘಟನೆ ಅಲ್ ಖೈದಾ ಜೊತೆಗೂ ಲಿಂಕ್ ಇದೆ ಎಂದು ಶಂಕೆ ವ್ಯಕ್ತವಾಗಿದೆ. ಬಾಂಗ್ಲಾ ಮತ್ತು ಕೊಲ್ಕತ್ತಾ ಪೊಲೀಸರು ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಜುಲೈ 1ರಂದು ನಗರದ ಮೊಮ್ಮನಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಕ್ಯಾಬ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಫೈಝಲ್ ಅಹ್ಮದ್ 2015ರ ಮೇ 12 ರಂದು ವಿಜ್ಞಾನ ಬರಹಗಾರ ಹಾಗೂ ಬ್ಲಾಗರ್ ಅನಂತ ವಿಜಯ ದಾಸ್ ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣದಲ್ಲಿ ಫೈಜಲ್ ಅಹ್ಮದ್ ಸೇರಿದಂತೆ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಆ ಬಳಿಕದಿಂದ ತಲೆಮರೆಸಿಕೊಂಡ ಫೈಝಲ್ ಗಾಗಿ ಬಾಂಗ್ಲಾ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈತ ಅಲ್ ಖೈದಾ ಘಟನೆಗಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಆದರೆ ಇದೀಗ ಆತ ಭಾರತದಲ್ಲಿ ಇರುವ ಬಗ್ಗೆ ಬಾಂಗ್ಲಾ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತ ಭಾರತದಲ್ಲಿ ಅಕ್ರಮವಾಗಿ ದಾಖಲೆ ಸೃಷ್ಟಿಸಿ ಓಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಮಾಡಿದ್ದಾನೆ.