ಬೆಂಗಳೂರು: ಕೆರೆಯಲ್ಲಿ ದೊರೆತ ಸೂಟ್ ಕೇಸ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ: ಪತಿ ಅರೆಸ್ಟ್
Sunday, July 3, 2022
ಬೆಂಗಳೂರು: ನಗರದ ದಾಬಸ್ ಪೇಟೆಯ ಬಳಿಯ ಕೆರೆಯಲ್ಲಿ ದೊರೆತ ಸೂಟ್ ಕೇಸ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ರಾಮು ಬಂಧಿತ ಆರೋಪಿ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಹೆಚ್ಚುವರಿ ಎಸ್ಪಿ ಲಕ್ಷ್ಮಿ ಗಣೇಶ್ ತಿಳಿಸಿದ್ದಾರೆ.
ಮೃತಪಟ್ಟ ಮಹಿಳೆ ಮಂಜುಳಾ ತನ್ನ ಮೊದಲ ಪತಿಯನ್ನು ತೊರೆದು ತನ್ನ ಇಬ್ಬರು ಮಕ್ಕಳೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನೆಲೆಸಿದ್ದರು. ಬಳಿಕ ಆಕೆ ಪೀಣ್ಯದಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಆಕೆಯು ಮೊದಲ ಬಾರಿಗೆ ರಾಮುವನ್ನು ಭೇಟಿಯಾಗಿದ್ದಳು. ಆ ಬಳಿಕ ಇಬ್ಬರೂ ಮದುವೆಯಾಗಿದ್ದರು ಎನ್ನಲಾಗಿದೆ. ಈ ನಡುವೆ ಇಬ್ಬರ ಮಧ್ಯೆ ಕಲಹ ನಡೆದಿದ್ದು, ಆಕೆ ಬಾಗಿಲು ತೆಗೆಯಲು ತಡೆ ಮಾಡಿರುವು ಹಾಗೂ ಊಟ ಬಡಿಸಲು ನಿರಾಕರಿಸಿದ್ದಕ್ಕೆ ಕೊಲೆಗೈದಿರುವುದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ.
ಕೊಲೆ ಮಾಡಿದ ಬಳಿಕಆರೋಪಿ ತನ್ನ ಸ್ನೇಹಿತನನ್ನು ಕರೆಸಿಕೊಂಡು ಮೃತದೇಹವನ್ನು ಸೂಟ್ ಕೇಸ್ ಒಳಗಡೆ ತುಂಬಿಸಿ ದ್ವಿಚಕ್ರ ವಾಹನದ ಮೂಲಕ ದಾಬಸ್ ಪೇಟೆ ಕೆರೆಗೆ ಎಸೆದಿದ್ದಾರೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.