ಪುತ್ತೂರು: ಗೋದಾಮಿನಿಂದ ಕಾಳುಮೆಣಸು ಕಳವುಗೈದ ನಾಲ್ವರು ಅರೆಸ್ಟ್

ಮಂಗಳೂರು: ಇಲ್ಲಿನ ಕೊಳ್ತಿಗೆ ಗ್ರಾಮದ ಕುದ್ಕೊಳಿ ಎಂಬಲ್ಲಿನ ತೋಟದ ಗೋದಾಮಿನಿಂದ ಕಾಳುಮೆಣಸು ಎಗರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಖದೀಮ ಕಳ್ಳರನ್ನು ಬಂಧಿಸಿರುವ ಪೊಲೀಸರು ಕಾಳುಮೆಣಸು ಹಾಗೂ ಕಾರೊಂದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮ ನಿವಾಸಿ ಮಂಜು, ಕೊಡಿಯಬೈಲು‌ ನಿವಾಸಿ ಪ್ರವೀಣ್, ಬರ್ಪೆಡ್ಕ ನಿವಾಸಿ ಪವನ್ ಕುಮಾರ್ ಹಾಗೂ ಅಬ್ದುಲ್ ಬಾಸಿತ್ ಬಂಧಿತ ಆರೋಪಿಗಳು. 

ಆರೋಪಿಗಳು ಕುದ್ಕುಳಿ ನಿವಾಸಿ ಮಹಮ್ಮದ್ ಶಾಫಿ ಎಂಬವರ ತೋಟದ ಮನೆಯ ಗೋದಾಮಿನಲ್ಲಿದ್ದ 1,18,750 ರೂ. ಮೌಲ್ಯದ ಕಾಳುಮೆಣಸನ್ನು ಕಳವುಗೈದಿದ್ದರು. ಬಂಧಿತರಿಂದ ಕಳವುಗೈದಿರುವ ಕಾಳು ಮೆಣಸು ಹಾಗೂ ಕಳವುಗೈಯಲು ಬಳಸಿರುವ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.