ಮಡಿಕೇರಿ: ಕತ್ತಲೆಕಾಡು ತಿರುವಿನಲ್ಲಿ ಸ್ಕೂಲ್ ವ್ಯಾನ್ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು; ಸಹಸವಾರ ಗಂಭೀರ ಗಾಯ
Wednesday, July 13, 2022
ಮಡಿಕೇರಿ: ಇಲ್ಲಿನ ಚಿಟ್ಟಳ್ಳಿ ಸಮೀಪದ ತಿರುವಿನಲ್ಲಿ ಸ್ಕೂಲ್ ವ್ಯಾನ್ ಹಾಗೂ ಬೈಕ್ ನಡುವೆ ಸಂಭವಿಸಿರುವ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಕೂಲಿ ಕಾರ್ಮಿಕ, ಮಕ್ಕಂದೂರು ನಿವಾಸಿ ಲಿತೀಶ್ ಪೂಜಾರಿ(22) ಮೃತಪಟ್ಟ ಯುವಕ. ಮೂರನೇ ಮೈಲ್ ನಿವಾಸಿ ಬಿ.ಎನ್.ಕೋಟಿ(60) ಗಾಯಗೊಂಡ ವ್ಯಕ್ತಿ. ಇವರಿಬ್ಬರೂ ಕೂಲಿ ಕೆಲಸಕ್ಕೆಂದು ಬೈಕ್ ನಲ್ಲಿ ಸಿದ್ದಾಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಇವರ ಬೈಕ್ ಗೆ ಚಿಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಶಾಲಾ ವ್ಯಾನ್ ಢಿಕ್ಕಿ ಹೊಡೆದಿದೆ.
ಪರಿಣಾಮ ಲಿತೀಶ್ ಪೂಜಾರಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಬಿ.ಎನ್.ಕೋಟಿಯವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಚಿಟ್ಟಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.