ಬಿಗ್ ಬಾಸ್ ದಿನಗಣನೆ ಸ್ಟಾರ್ಟ್: ಇದು 'ಸೀಸನ್ 9' ಅಲ್ಲ, 'ಒಟಿಟಿ ನಂ 1'

ಬೆಂಗಳೂರು: ಸದ್ಯದಲ್ಲೇ 'ಬಿಗ್ ಬಾಸ್' ಆರಂಭವಾಗುತ್ತಿದೆ. ಆದರೆ ಇದು 'ಬಿಗ್ ಬಾಸ್ ಸೀಸನ್ 9' ಅಲ್ವ ಎಂದು ನಾವಂದುಕೊಂಡರೆ. ತಪ್ಪು... ಇದು ಬಿಗ್ ಬಾಸ್ ಸೀಸನ್ 1' ಎನ್ನುತಾರೆ.

ಅರೇ ಕಳೆದ ಬಾರಿ ಮಂಜು ಪಾವಗಡ ಗೆದ್ದಿರೋದು 'ಬಿಗ್ ಬಾಸ್ 8ನೇ ಸೀಸನ್ ಎಂದು ಎಲ್ಲರಿಗೆ ನೆನಪಿದೆ.‌ ಮತ್ತೇನಿದು ಸೀಸನ್ 1 ಎಂದು ಎಲ್ಲರೂ ಕನ್ಫ್ಯೂಷನ್ ಆಗಬಹುದು. ಹೌದು... ಈ ಹಿಂದೆ ಪ್ರಸಾರವಾಗುತ್ತಿದ್ದ 'ಬಿಗ್ ಬಾಸ್' 24 hour ಲೈವ್ ಬರುತ್ತಿರಲಿಲ್ಲ. ಹಾಗೆಯೇ, ವೂಟ್‌ನಲ್ಲಿ ಪ್ರಸಾರವಾಗುತ್ತಿರಲಿಲ್ಲ. ಈ ಬಾರಿ, ಅವೆರಡೂ ಆಗುತ್ತಿರುವುದರಿಂದ ಇದು 'ಬಿಗ್ ಬಾಸ್ ಓಟಿಟಿ' ಸೀಸನ್ 1 ಎನ್ನಬಹುದು. 

ಅಂದಹಾಗೆ, 'ಬಿಗ್ ಬಾಸ್ ಓಟಿಟಿ 1' ಆಗಸ್ಟ್ 6 ರಿಂದ ಸಂಜೆ 7ಕ್ಕೆ ಪ್ರಸಾರವಾಗಲಿದೆ. ಈ ಸಂಬಂಧ ಪ್ರೋಮೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗಲಿದೆ. ಇದೊಂದು ಮಿನಿ ಸೀಸನ್ ಆಗಿದ್ದು, 42 ದಿನಗಳ ಕಾಲ ವೂಟ್ ನಲ್ಲಿ ಪ್ರಸಾರವಾಗಲಿದೆ. ಇದು ಮುಗಿಯುತ್ತಿದ್ದಂತೆಯೇ, ಕಲರ್ಸ್ ಕನ್ನಡದಲ್ಲಿ 'ಬಿಗ್ ಬಾಸ್ - ಸೀಸನ್ 9' ಪ್ರಸಾರವಾಗಲಿದೆ. ಈ ಕಾರ್ಯಕ್ರಮ ಎಂದಿನಂತೆ 100 ದಿನ ಪ್ರಸಾರವಾಗಲಿದೆ. ಈ ಎರಡೂ ಕಾರ್ಯಕ್ರಮಗಳನ್ನು ಸುದೀಪ್ ಅವರೇ ನಡೆಸಿಕೊಡುತ್ತಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu