-->
ಬೆಂಗಳೂರು: ಕಾಲೇಜು ಬ್ಯಾಂಕ್ ಖಾತೆಯಿಂದಲೇ 8.92 ಲಕ್ಷ ರೂ. ಎಗರಿಸಿದ ಖದೀಮ ಕಳ್ಳರು!

ಬೆಂಗಳೂರು: ಕಾಲೇಜು ಬ್ಯಾಂಕ್ ಖಾತೆಯಿಂದಲೇ 8.92 ಲಕ್ಷ ರೂ. ಎಗರಿಸಿದ ಖದೀಮ ಕಳ್ಳರು!

ಬೆಂಗಳೂರು: ನಗರದ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ಅಭಿವೃದ್ಧಿ ಬ್ಯಾಂಕ್ ಖಾತೆಯಿಂದ 8.92 ಲಕ್ಷ ರೂ. ನಗದು ಆನ್ಲೈನ್ ಮೂಲಕ ವರ್ಗಾವಣೆ ಮಾಡಿರುವ ವಂಚನೆಯೊಂದು ಬೆಳಕಿಗೆ ಬಂದಿದೆ.

ಈ ಬಗ್ಗೆ ಕಾಲೇಜು ಪ್ರಾಂಶುಪಾಲ ಡಾ.ವೈ.ವೆಂಕಟೇಶಪ್ಪ ಪಶ್ಚಿಮ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರ್ ಪಿಸಿ ಬಡಾವಣೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಈ ಕಾಲೇಜಿನ ಕ್ರೀಡಾ ಅಭಿವೃದ್ಧಿ ಬ್ಯಾಂಕ್ ಖಾತೆಯನ್ನು ತೆರೆಯಲಾಗಿತ್ತು. ಆದರೆ ಕಾಲೇಜು ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ಮೇ 12 ರಿಂದ 30ರವರೆಗೆ ಹಂತ ಹಂತವಾಗಿ 8.92 ಲಕ್ಷ ರೂ. ಹಣವನ್ನು ಬೇರೊಂದು ಖಾತೆಗೆ ಆನ್ಲೈನ್ ಮೂಲಕ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article