-->
ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಚಿಕನ್ ಸುಡುವ ಬರ್ನರ್ ನಲ್ಲಿ ಸುಟ್ಟುಹಾಕಿದ ಪತ್ನಿ: 8 ತಿಂಗಳ ಬಳಿಕ ಕೃತ್ಯ ಬಯಲು

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಚಿಕನ್ ಸುಡುವ ಬರ್ನರ್ ನಲ್ಲಿ ಸುಟ್ಟುಹಾಕಿದ ಪತ್ನಿ: 8 ತಿಂಗಳ ಬಳಿಕ ಕೃತ್ಯ ಬಯಲು

ಚಿಕ್ಕಬಳ್ಳಾಪುರ: ಪತಿ ಆತ್ಮಹತ್ಯೆ ಮಾಡಿದ್ದಾನೆಂದು ದೂರು ನೀಡಿರುವ ಪತ್ನಿಯೇ ಹಂತಕಿ ಎಂಬ ವಿಚಾರವನ್ನು ಪೊಲೀಸರು ಬಯಲಿಗೆಳೆದಿದ್ದಾರೆ‌. ಇದೀಗ ಪತ್ನಿ ಮತ್ತು ಆಕೆಯ ಪ್ರಿಯಕರ ಪೊಲೀಸ್ ಅತಿಥಿಗಳಾಗಿದ್ದಾರೆ.

ಈ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಜಿಗುಂಟೆ ಗ್ರಾಮದ ಮೆಹರ್ ಮತ್ತು ಆಕೆಯ ಪ್ರಿಯಕರ ತೌಸಿಫ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೆಹರ್ ಪತಿಯನ್ನು ಚಿಕನ್ ಸುಡುವ ಬರ್ನರ್ ನಲ್ಲಿ ಸುಟ್ಟುಹಾಕಿ ಕೊಲೆಗೈದಿದ್ದಳು. ಆ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಳು. ಇದೀಗ 8 ತಿಂಗಳ ಬಳಿಕ ಪೊಲೀಸರು ಆರೋಪಿ ಮೆಹರ್ ತನ್ನ ಪ್ರಿಯಕರ ತೌಸಿಫ್ ನೊಂದಿಗೆ ಸೇರಿ ಪತಿ ದಾದಾಪೀರ್​ನನ್ನು ಕೊಲೆ ಮಾಡಿರುವುದಾಗಿ ತನಿಖೆಯಿಂದ ಬಯಲಿಗಳೆದಿದ್ದಾರೆ. 

ಆರೋಪಿ ಮೆಹರ್ ತನ್ನ ಪತಿ ದಾದಾಪೀರ್ ಗೆ ನಿದ್ರೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿದ್ದಾಳೆ. ಬಳಿಕ ಚಿಕನ್ ಸುಡುವ ಗ್ಯಾಸ್ ಗನ್ ನಿಂದ ಸುಟ್ಟು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ಬಗ್ಗೆ ಮೃತ ದಾದಾಪೀರ್ ನ ಸಹೋದರಿ ರೇಷ್ಮಾ ತಾಜ್ ತನ್ನ ಸಹೋದರನ ಸಾವು ಕೊಲೆ ಆಗಿರಬಹುದು ಎಂದು ಶಂಕಿಸಿ ಪೊಲೀಸ್ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮೆಹರ್ ಹಾಗೂ ತೌಸಿಫ್​ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article