ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಕನ್ನಡ ಮಾತ್ರವಲ್ಲದೆ ಭಾರತದಾದ್ಯಂತ ಅದ್ದೂರಿ ಮೇಕಿಂಗ್ ಹಾಗೂ ಟ್ರೈಲರ್ಗಳಿಂದ ಸುದ್ದಿಯಲ್ಲಿದೆ. ಈ ಸಿನಿಮಾ ಬಿಡುಗಡೆಗೆ ಇನ್ನೇನು ಎರಡೇ ದಿನ ಬಾಕಿ ಇರುವಾಗಲೇ ವಿಕ್ರಾಂತ್‌ರೋಣ ಬಗ್ಗೆ ನಿರ್ಮಾಪಕರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಾಳೆ 27 ದೇಶಗಳಲ್ಲಿ ವಿಕ್ರಾಂತ್ ರೋಣ ಸಿನಿಮಾದ ಪ್ರೀಮಿಯರ್ ಶೋ ನಡೆಯುತ್ತಿದೆ. ದುಬೈನಲ್ಲಿ 5 ಭಾಷೆಗಳಲ್ಲಿ ಪ್ರದರ್ಶನವಾಗುತ್ತಿದೆ. ನಿನ್ನೆಯಷ್ಟೇ ನೇಪಾಳ ಕನ್‌ಫರ್ಮ್ ಆಗಿದ್ದು, ಪಾಕಿಸ್ತಾನದಲ್ಲೂ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ. ಒಟ್ಟಾರೆ ಪ್ರಪಂಚದಾದ್ಯಂತ 3,200ರಿಂದ 3,500 ಚಿತ್ರಮಂದಿರಗಳಲ್ಲಿ ವಿಕ್ರಾಂತ್ ರೋಣ ರಿಲೀಸಾಗುತ್ತಿದೆ ಎಂದು ನಿರ್ಮಾಪಕ ಜಾಕ್ ಮಂಜು ಹೇಳಿದರು.
ಶೇ 60 ಭಾಗ ಸಿನಿಮಾದಲ್ಲಿ ತ್ರಿಡಿಯಲ್ಲಿ ಇಫೆಕ್ಟ್ ಇದೆ. ತ್ರಿಡಿ ಇಲ್ಲದಿದ್ದಲ್ಲಿ 2ಡಿ ವರ್ಷನ್ ಪ್ರದರ್ಶನವಾಗಲಿದೆ. ಇತ್ತೀಚೆಗೆ ವಿಕ್ರಾಂತ್ ರೋಣ ದುಬೈನಲ್ಲಿ ವರ್ಲ್ಡ್ ಪ್ರೀಮಿಯರ್ ಮುಗಿಸಿದೆ. ಸಿನಿಮಾ ಇದೀಗ 'ಸಿನೆಬಡ್ಸ್' ಎಂಬ ಆ್ಯಪ್ ಮೂಲಕ ಎಲ್ಲರಿಗೂ ಇಷ್ಟವಾಗುವ ಭಾಷೆಗಳಲ್ಲಿ ನೋಡುವ ಅವಕಾಶವನ್ನು ಪ್ರೇಕ್ಷಕರಿಗೆ ಕಲ್ಪಿಸಲಾಗುತ್ತಿದೆ.