ವಯಸ್ಸು ಇನ್ನೂ 30, ಖ್ಯಾತ ನಟ ಕ್ಯಾನ್ಸರ್ ಗೆ ಬಲಿ!
Sunday, July 3, 2022
ಚೆನ್ನೈ: ಇನ್ನೂ 30 ವರ್ಷ, ಬಾಳಿ ಬದುಕಬೇಕಾದ ವರ್ಷ. ಇನ್ನೂ ಸಾಕಷ್ಟು ಸಿನಿಮಾಗಳನ್ನು ಮಾಡಬಹುದಿತ್ತು. ಆದರೆ ಆತ ಇನ್ನು ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಾರೆ. ಆತ ಮಾರಕ ಕಾಯಿಲೆ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.
ಹೌದು.. ಅಸ್ಸಾಂನ ಪ್ರಖ್ಯಾತ ನಟ ಕಿಶೋರ್ ದಾಸ್ ತಮ್ಮ 30ನೇ ವಯಸ್ಸಿಗೆ ಬಾರದ ಲೋಕದತ್ತ ಪ್ರಯಾಣ ಬೆಳೆಸಿದ್ದಾರೆ. ಚೆನ್ನೈನ ಆಸ್ಪತ್ರೆಯೊಂದರಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕಿಶೋರ್ ದಾಸ್ ಶನಿವಾರ ರಾತ್ರಿ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.
ಕಿಶೋರ್ ದಾಸ್ ಇತ್ತೀಚೆಗೆ ತಾನು ಗುಣಮುಖನಾಗುತ್ತಿದ್ದೇನೆ ಎಂದು ಆಸ್ಪತ್ರೆಯಿಂದ ಫೋಟೋ ಸಹಿತ ಪೋಸ್ಟ್ ಮಾಡಿದ್ದರು. ಆದರೆ ಅವರು ಮಾತ್ರ ಗುಣಮುಖರಾಗಲೇ ಇಲ್ಲ.