-->

'ಸಂರ್ಷದಿಂದ ಶಿಖರದವರೆಗೆ' ದ್ರೌಪದಿ ಮುರ್ಮು ಪುಸ್ತಕ ಬರೆದ 13ರ ಬಾಲಕಿ

'ಸಂರ್ಷದಿಂದ ಶಿಖರದವರೆಗೆ' ದ್ರೌಪದಿ ಮುರ್ಮು ಪುಸ್ತಕ ಬರೆದ 13ರ ಬಾಲಕಿ

ಸೂರತ್ ( ಗುಜರಾತ್ ) : ದ್ರೌಪದಿ ಮುರ್ಮು ಹೆಸರು ಈಗ ಎಲ್ಲರಿಗೂ ಚಿರಪರಿಚಿತ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾದ ಮೊದಲ ಆದಿವಾಸಿ ಮಹಿಳೆ ಎಂದು ಎಲ್ಲರಿಗೂ ಗೊತ್ತಿದ್ದ ವಿಚಾರ‌. ಇಂದು ರಾಷ್ಟ್ರಪತಿ ಚುನಾವಣೆ . ಎನ್ ಡಿಎ ಅಭ್ಯರ್ಥಿ ದೌಪದಿ ಮುರ್ಮು ಅವರ ಗೆಲುವು ಬಹುತೇಕ ನಿಶ್ಚಿತ. ಮುರ್ಮು ಅವರ ಜೀವನ ದುರಂತಮಯವೆಂದರೆ ತಪ್ಪಲ್ಲ. ಪತಿ , ಮಕ್ಕಳನ್ನು ಕಳೆದುಕೊಂಡು ಸಹಿಸಲಾಗದ ನೋವು , ಬಡತನದಲ್ಲಿಯೇ ಬೆಂದು ಬಳಲಿದ್ದ ಒಂದು ಜೀವ. ಆದರೆ ಈ ಎಲ್ಲಾಅ ಸಂಘರ್ಷಗಳನ್ನು ಎದುರಿಸಿ ಇಂದು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಲು ಸಜ್ಜಾಗಿ ನಿಂತಿರುವುದು ಸುಲಭದ ಮಾತೇನಲ್ಲ. 

ಆದರೆ ಮುರ್ಮು ಅವರ ಜೀವನಗಾಥೆಯನ್ನು ತಿಳಿದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಈ ಸಂಘರ್ಷಮಯ ಜೀನವದಿಂದ ಉನ್ನತ ಸ್ಥಾನಕ್ಕೆ ಏರಲು ಸಿದ್ಧತೆ ನಡೆಸಿರುವ ಮುರ್ಮು ಅವರ ಸಾಹಸಗಾಥೆಯನ್ನು 13 ವರ್ಷದ ಬಾಲಕಿ ಭವಿಕಾ ಮಹೇಶ್ವರಿ ಪುಸ್ತಕ ರೂಪದಲ್ಲಿ ಬಿಡುಗಡೆಗೊಳಿಸಿದ್ದಾಳೆ.

ಗುಜರಾತ್ ರಾಜ್ಯದ ಸೂರತ್‌ನ ಭವಿಕಾ ಟ್ವಿಟರ್‌ನಲ್ಲಿ ಈ ವಿಚಾರವನ್ನು ತಿಳಿಸಿದ್ದಾಳೆ. ರವಿವಾರ ತನ್ನ ಚೊಚ್ಚಲ ಪುಸ್ತಕ 'ಸಂಘರ್ಷ್ ಸೇ ಶಿಖತ್ ತಕ್ - ದೌಪದಿ ಮುರ್ಮುಜಿ' ( ಸಂಘರ್ಷದಿಂದ ಶಿಖರದವರೆಗೆ- ದೌಪದಿ ಮುರ್ಮು ) ಯನ್ನು ಅನಾವರಣಗೊಳಿಸಿದ್ದಾಳೆ.

ಇತ್ತೀಚೆಗೆ ದೆಹಲಿಯ ರಾಷ್ಟ್ರಪತಿ ಭವನಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿರುವ ಭವಿಕಾಗೆ ಆಕೆಯ ತಂದೆ ದೌಪದಿ ಮುರ್ಮು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಗ್ಗೆ ತಂದೆ ತಿಳಿಸಿದ್ದರಂತೆ. ಅಲ್ಲದೆ ಆಕೆ ಆಯ್ಕೆಯಾದರೆ ಬುಡಕಟ್ಟು ಸಮುದಾಯದಿಂದ ಆಯ್ಕೆಯಾದ ಮೊದಲ ರಾಷ್ಟ್ರಪತಿಯಾಗಲಿದ್ದಾರೆ ಎಂದು ಹೇಳಿದ್ದರಂತೆ ಇದುವೇ ತನಗೆ ಪುಸ್ತಕ ಬರೆಯಲು ಪ್ರೇರಣೆ ನೀಡಿದೆ ಎಂದು ಆಕೆ ಹೇಳಿದ್ದಾಳೆ. 

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಶ್ಚಿಮ ಬಂಗಾಳ ಸಿಎಂ , ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಟ್ಯಾಗ್ ಮಾಡಿ , ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಅವರಿಗೆ ಬೆಂಬಲ ನೀಡುವಂತೆ ಬಾಲಕಿ ಕೋರಿದ್ದಾಳೆ. ಮುರ್ಮು ಅವರ ಕುರಿತ ಪುಸ್ತಕಗಳನ್ನು ದೆಹಲಿಯ ಮಾರುಕಟ್ಟೆ ಮತ್ತು ಇಂಟರ್‌ನೆಟ್‌ನಲ್ಲಿ ಹುಡುಕಿದೆ. ಎಲ್ಲಿಯೂ ಅವರ ಬಗ್ಗೆ ಪುಸ್ತಕಗಳು ಸಿಗಲಿಲ್ಲ . ಆದರೆ ಅವರ ಜೀವನ ನನಗೆ ಸ್ಫೂರ್ತಿಮಯದಂತೆ ತೋರಿತು . ಅವರ ಬಗ್ಗೆ ಸಾಕಷ್ಟು ವಿಷಯಗಳನ್ನು ಕಲೆ ಹಾಕಿ ಪುಸ್ತಕ ಬರೆಯಲು ಆರಂಭಿಸಿದೆ . ಈ ಪುಸ್ತಕದಿಂದ ಮುರ್ಮು ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ಭವಿಕಾ ಅಭಿಪ್ರಾಯಪಟ್ಟಿದ್ದಾರೆ.

 

Ads on article

Advertise in articles 1

advertising articles 2

Advertise under the article