-->
ಶಿರ್ವ: ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಶಾಪ್ ನಲ್ಲಿ ಲಕ್ಷಾಂತರ ರೂ‌. ನೆಕ್ಲೆಸ್ ಕದ್ದ ಖದೀಮರು

ಶಿರ್ವ: ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಶಾಪ್ ನಲ್ಲಿ ಲಕ್ಷಾಂತರ ರೂ‌. ನೆಕ್ಲೆಸ್ ಕದ್ದ ಖದೀಮರು

ಮಂಗಳೂರು: ಜ್ಯುವೆಲ್ಲರಿ ಶಾಪ್ ಗೆ ಗ್ರಾಹಕರ ಸೋಗಿನಲ್ಲಿ ಬಂದಿರುವ ಅಪರಿಚಿತರಿಬ್ಬರು ಲಕ್ಷಾಂತರ ರೂ. ಮೌಲ್ಯದ ನೆಕ್ಲೆಸ್ ನೊಂದಿಗೆ ಪರಾರಿಯಾಗಿರುವ ಘಟನೆ ನಗರದ ಶಿರ್ವದಲ್ಲಿ ನಡೆದಿದೆ.

ಕುತ್ಯಾರುವಿನ ಕೆ.ವಿವೇಕಾನಂದ‌ ಆಚಾರ್ಯ ಅವರ ಶಿರ್ವ ಪೇಟೆಯಲ್ಲಿರುವ ಕೃಪಾ ಜ್ಯುವೆಲ್ಲರ್ಸ್ ನಲ್ಲಿ ಜೂ.6ರಂದು ಈ ಘಟನೆ ನಡೆದಿದೆ. ಅಪರಿಚಿತರಿಬ್ಬರು ಚಿನ್ನ ಖರೀಸಿಸುವ ನೆಪದಲ್ಲಿ ನೆಕ್ಲೆಸ್ ಅನ್ನು ಎಗರಿಸಿದ್ದಾರೆ‌. ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು. ಈ ಖದೀಮರು 28.799 ಗ್ರಾಂ ತೂಕದ 1,49,000 ರೂ‌. ಮೌಲ್ಯದ ನೆಕ್ಲೆಸ್ ಅನ್ನು ಎಗರಿಸಿದ್ದಾರೆ.

ಜೂ.9ರಂದು ಸಿಸಿ ಕ್ಯಾಮರಾವನ್ನು ಪರಿಶೀಲನೆ ನಡೆಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article