ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಪತ್ನಿ, ಆಕೆಯ ಸ್ನೇಹಿತರ ಕಾಟ ಸಹಿಸಿಕೊಳ್ಳದೆ ಕಾರು ಅಪಘಾತ ಮಾಡಿಸಿ ವ್ಯಕ್ತಿ ಪುತ್ರನೊಂದಿಗೆ ಮೃತ್ಯು

ತಿರುವನಂತಪುರ: ಪತ್ನಿ ಹಾಗೂ ಆಕೆಯ ಸ್ನೇಹಿತರ ಕಾಟವನ್ನು ಸಹಿಸಿಕೊಳ್ಳಲಾರದೆ ವ್ಯಕ್ತಿಯೋರ್ವರು ತನ್ನ ಕಾರನ್ನೇ ಟ್ರಕ್​ಗೆ ಗುದ್ದಿ ಪುತ್ರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆಯೊಂದು ಕೇರಳದ ತಿರುವನಂತಪುರದಲ್ಲಿ ನಡೆದಿದೆ.

ಪ್ರಕಾಶ್(48) ಹಾಗೂ ಅವರ ಪುತ್ರ ಶಿವದೇವ್(11) ಈ ದುರ್ಘಟನೆಯಲ್ಲಿ ಮೃತಪಟ್ಟವರು.

ಕೃತ್ಯ ಎಸಗುವ ಮುನ್ನ ಪ್ರಕಾಶ್ ತನ್ನ ಪತ್ನಿ ಮತ್ತು ಆಕೆಯ ಸ್ನೇಹಿತರ ಫೋಟೋಗಳನ್ನು ಶೇರ್​ ಮಾಡಿ 'ನಾನು ಸಾಯುತ್ತಿದ್ದೇನೆ. ನನ್ನ ಸಾವಿಗೆ ಇವರುಗಳೇ ಕಾರಣರು. ಅವರಿಗೆ ಸೂಕ್ತ ಶಿಕ್ಷೆಯಾಗಬೇಕು' ಎಂದು  ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಈ ದಂಪತಿ ನಡುವೆ ಸಂಬಂಧ ಚೆನ್ನಾಗಿ ಇರಲಿಲ್ಲ. ಪತ್ನಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಊರಿಗೆ ಮರಳಲು ಒಪ್ಪುತ್ತಿರಲಿಲ್ಲ. ಅಲ್ಲದೆ ತನ್ನ ಐಷಾರಾಮಿ ಜೀವನಕ್ಕೆ ಪತಿಗೆ ಸಾಕಷ್ಟು ಬೇಡಿಕೆ ಇಟ್ಟು ಕಾಟ ಕೊಡುತ್ತಿದ್ದಳು. ಆದರೆ ಆಕೆ ಊರಿಗೆ ಮಾತ್ರ ಬರುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತವಾಗಿದ್ದ ಕಾರಿನಲ್ಲಿಯೂ ಡೆತ್​ನೋಟ್​ ಪತ್ತೆಯಾಗಿತ್ತು‌‌. ಅದರಲ್ಲಿ ನಾಲ್ಕು ಮಂದಿ ಹೆಸರನ್ನು ಬರೆದಿದ್ದಾರೆ. ನನ್ನ ಪತ್ನಿ ಹಾಗೂ ಆಕೆಯ ಸ್ನೇಹಿತರು ನನಗೆ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಡೆತ್​ನೋಟ್​ನಲ್ಲಿ ಬರೆಯಲಾಗಿದೆ. ಈ ಸ್ನೇಹಿತರು ಯಾರು? ಅವರು ಏನು ಹಿಂಸೆ ಕೊಡುತ್ತಿದ್ದರು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.