-->
1000938341
ಕಾರ್ಕಳ: ವಿಕಲಚೇತನ ಪುತ್ರನನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡ ತಂದೆ

ಕಾರ್ಕಳ: ವಿಕಲಚೇತನ ಪುತ್ರನನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡ ತಂದೆ

ಕಾರ್ಕಳ: ವಿಕಲಚೇತನ ಪುತ್ರನನ್ನು ಬಾವಿಗೆ ತಳ್ಳಿ ಹತ್ಯೆಗೈದ ತಂದೆಯೋರ್ವನು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಕೇರ್ವಾಶೆಯಲ್ಲಿ‌ ನಡೆದಿದೆ.

ಪಾಚರಬೆಟ್ಟು ಕೃಷ್ಣ ಪೂಜಾರಿ, ಅವರ ಪುತ್ರ ದೀಪೇಶ್(26) ಮೃತಪಟ್ಟ ದುರ್ದೈವಿಗಳು.

ಕೃಷ್ಣ ಪೂಜಾರಿಯವರ ಪತ್ನಿ ಅನಾರೋಗ್ಯ ಪೀಡಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆಗಾಗಿ ಮುಂಬೈಗೆ ತೆರಳಿದ್ದರು. ಈ ವೇಳೆ ತಂದೆ ಹಾಗೂ ಮಗ ಇಬ್ಬರೇ ಇದ್ದರು. ಪುತ್ರ ವಿಕಲಚೇತನನೆಂಬ ವಿಚಾರದಲ್ಲಿ ಮನನೊಂದಿದ್ದ ಕೃಷ್ಣ ಪೂಜಾರಿ ಮೊದಲಿಗೆ ಆತನನ್ನು ಬಾವಿಗೆ ತಳ್ಳಿದ್ದಾರೆ. ಆ ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ.

Ads on article

Advertise in articles 1

advertising articles 2

Advertise under the article