Subrahmanya:-ಇಂದು ಕರ್ನಾಟಕ ರಾಜ್ಯಪಾಲರ ದ. ಕ ಜಿಲ್ಲಾ ಪ್ರವಾಸ. ಮಧ್ಯಾಹ್ನ ಕುಕ್ಕೆಗೆ ಭೇಟಿ..
Thursday, June 30, 2022
ಸುಬ್ರಮಣ್ಯ
ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಮಾನ್ಯ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಅಂದರೆ ಜೂ.30ರಿಂದ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಲಭ್ಯ ಮಾಹಿತಿಗಳ ಪ್ರಕಾರ ಅವರ ಪ್ರವಾಸ ವಿವರಗಳು ಹೀಗಿವೆ. ಅವರು ಜೂ.30ರ ಗುರುವಾರ ಮಧ್ಯಾಹ್ನ 12.45ಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಇಲ್ಲಿನ ಅಥಿತಿಗೃಹದಲ್ಲಿ ವಾಸ್ತವ್ಯ ಹೂಡುವರು. ಮಧ್ಯಾಹ್ನ 3 ಗಂಟೆಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ರಾಜ್ಯಪಾಲರು ಸಂವಾದ ನಡೆಸಲಿದ್ದು ರಾತ್ರಿ ದೇವಸ್ಥಾನದ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು.