ಆಳ್ವಾರ್ (ರಾಜಸ್ಥಾನ) : ಇಲ್ಲಿನ ಜಿಲ್ಲೆಯ ರಾಮಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಿವಾಹಿತೆಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. 
ಜೂನ್ 12ರಂದು ರಾತ್ರಿ ವೇಳೆ ದಂಪತಿ ಟೆರೇಸ್ ಮೇಲೆ ಮಲಗಿದ್ದರು. ಆ ವೇಳೆ ಅಪ್ರಾಪ್ತೆಯ ಮೇಲೆ ನೆರೆಹೊರೆಯ ಐವರು ಯುವಕರು ಚಾಕು ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಮಗಢ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ. 
ವಿವಾಹಿತೆ ತನ್ನ ಪತಿಯೊಂದಿಗೆ ಟೆರೇಸ್ ಮೇಲೆ ಮಲಗಿದ್ದಳು. ಆದರೆ ರಾತ್ರಿ 12 ಗಂಟೆ ಸುಮಾರಿಗೆ ನೆರೆಹೊರೆಯ ಐವರು ಯುವಕರು ಏಕಾಏಕಿ ಅಲ್ಲಿಗೆ ಬಂದಿದ್ದಾರೆ. ಬಳಿಕ ಆಕೆಗೆ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ವಿವಾಹಿತೆಯ ಪತಿ ನಿದ್ದೆಯಿಂದ ಎದ್ದಿದ್ದಾನೆ. ಇದರಿಂದ ಹೆದರಿದ ಕಾಮುಕರು ಅಲ್ಲಿಂದ ಪರಾರಿಯಾಗಿದ್ದಾರೆ. ವಿವಾಹಿತೆ ಘಟನೆಯ ಬಗ್ಗೆ ಪತಿ ಮತ್ತು ಮನೆಯವರಿಗೆ ತಿಳಿಸಿದ್ದಾಳೆ. ನಂತರ ಸಂಬಂಧಿಕರು ರಾಮಗಢ ಪೊಲೀಸ್ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
 
   
 
 
 
 
 
 
 
 
 
 
 
 
 
 
 
 
 
 
