-->
ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಸುಣ್ಣ ಅಲಭ್ಯ: ರೈತ ಸಂಘ ಆತಂಕ

ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಸುಣ್ಣ ಅಲಭ್ಯ: ರೈತ ಸಂಘ ಆತಂಕ

ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಸುಣ್ಣ ಅಲಭ್ಯ: ರೈತ ಸಂಘ ಆತಂಕ

ಮುಂಗಾರು ಪೂರ್ವದಲ್ಲಿ ಕೃಷಿ ಚಟುವಟಿಕೆ ಆರಂಭವಾಗಿದ್ದರೂ ದ.ಕ ಜಿಲ್ಲೆಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಸುಣ್ಣ ಅಲಭ್ಯವಾಗಿದೆ ಎಂದು ಕ.ರಾ.ರೈತ ಸಂಘ(ಕೋಡಿಹಳ್ಳಿ ಬಣ)ದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಆತಂಕ ವ್ಯಕ್ತಪಡಿಸಿದ್ದಾರೆ.ಅತೀವ ಮಳೆಯ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಭೂಮಿಯು ಹುಳಿಯಾಗಿ ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತದೆ. ಈ ಮಣ್ಣಿಗೆ ಕೃಷಿ ಸುಣ್ಣವನ್ನು ಉಪಯೋಗಿಸಬೇಕೆಂದು ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳು ತಮ್ಮ ಮಾಹಿತಿ ಶಿಬಿರದ ಭಾಷಣಗಳಲ್ಲಿ ತಿಳಿಸಿರುತ್ತಾರೆ. ಆದರೂ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಸುಣ್ಣ ಅಲಭ್ಯವಾಗಿದೆ.. ಈ ಬಗ್ಗೆ ಕೃಷಿ ಅಧಿಕಾರಿಗಳನ್ನು ಕೇಳಿದಾಗ ಪ್ರಸ್ತುತ ಹಂಗಾಮಿನಲ್ಲಿ ಈ ಬಗ್ಗೆ ಕಾರ್ಯಕ್ರಮವಿಲ್ಲ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರಸಕ್ತ ವರ್ಷದ ಕೃಷಿ ಕಾರ್ಯಕ್ಕೆ ಬೇಕಾದಷ್ಟು ಬೀಜ, ಸುಣ್ಣ, ರಸಗೊಬ್ಬರ ತಕ್ಷಣ ಲಭ್ಯವಾಗಬೇಕೆಂದು ಅವರು ಒತ್ತಾಯಿಸಿದರು..ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಬೈಲುಗುತ್ತು ಶ್ರೀಧರ ಶೆಟ್ಟಿ, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘದ ಬೆಳವಣಿಗೆಯನ್ನು ಸಹಿಸಲಾಗದ ರಾಜಕೀಯ ಪಕ್ಷಗಳು ಪವರ್ ಟಿವಿ ಮೂಲಕ ಚಾರಿತ್ರ್ಯ ಹರಣ ಮಾಡುವುದನ್ನು ಖಂಡಿಸಿದರು.ಉಡುಪಿ ಕಾಸರಗೋಡು 400 ಮೇಗಾವಾಟ್ ವಿದ್ಯುತ್ ಪ್ರಸರಣ ವೆಂಬ ಪೆಡಂಭೂತದ ಮೂಲಕ ಅಭಿವೃಧ್ಧಿಯ ಹೆಸರಲ್ಲಿ ರೈತ ಭೂಮಿ ನಾಶ ಮಾಡುವುದನ್ನು ಖಂಡಿಸಿ ಹೋರಾಟ ಮುಂದುವರಿಸುವುದಲ್ಲದೆ ಹಾಗೂ ರೈತರ ಇತರ ಬೇಡಿಕೆಗಳಾದ ರೈತರ ಕುಮ್ಕಿ ಹಕ್ಕು ಹಾಗೂ ಬಾಕಿ ಉಳಿದಿರುವ ಅಕ್ರಮ ಸಕ್ರಮವನ್ನು ಅತಿ ಶೀಘ್ರದಲ್ಲಿ ವಿಲೇವಾರಿ ಮಾಡಬೇಕೆಂದು ಅವರು ಒತ್ತಾಯಿಸಿದರು..

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article