-->
ಜನರಿಗೆ ಸಿಹಿ ಸುದ್ದಿ- ಖಾದ್ಯ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ

ಜನರಿಗೆ ಸಿಹಿ ಸುದ್ದಿ- ಖಾದ್ಯ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ

ಜನರಿಗೆ ಸಿಹಿ ಸುದ್ದಿ- ಖಾದ್ಯ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ





ಗಗನಕ್ಕೇರಿದ ತಾಳೆ ಎಣ್ಣೆ, ಸೂರ್ಯ ಕಾಂತಿ ಎಣ್ಣೆ, ಸೋಯಾಬಿನ್ ಎಣ್ಣೆ ಬೆಲೆ ಇಳಿಕೆ ಕಂಡಿದೆ. ಇದೀಗ ಲೀಟರ್‌ಗೆ ರೂ. 15ರಷ್ಟು ಇಳಿಕೆ ಮಾಡಲಾಗಿದೆ.


ವಿಶ್ವ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದ ಹಿನ್ನೆಲೆಯಿಂದಾಗಿ ದರ ಕಡಿತ ಮಾಡಲಾಗಿದೆ. ತಾಳೆ ಎಣ್ಣೆ ಲೀಟರ್‌ಗೆ ಸುಮಾರು ರೂ. 7-8 ರೂಪಾಯಿ, ಸೂರ್ಯಕಾಂತಿ ಎಣ್ಣೆ ಲೀಟರ್‌ಗೆ ರೂ. 10-15 ಇಳಿಕೆಯಾಗಿದೆ. ಸೋಯಾಬಿನ್ ಎಣ್ಣೆ ಬೆಲೆಯಲ್ಲಿ ರೂ. 5 ಇಳಿಕೆ ಆಗಿದೆ.


"ತೈಲ ಬೆಲೆ ಇಳಿಕೆಯಾದ ಕಾರಣದಿಂದಾಗಿ ಬೇಡಿಕೆಯೂ ಅಧಿಕವಾಗುವ ಸಾಧ್ಯತೆ ಇದೆ. ಫುಡ್ ಇನ್‌ಫ್ಲೇಷನ್ ಮೇಲೆ ಇದು ಪ್ರಭಾವ ಬೀರಲಿದೆ," ಎಂದು Oil Producers Association ತಿಳಿಸಿದೆ.


ಕಳೆದ ಮೇ ನಲ್ಲಿ ಖಾದ್ಯ ತೈಲದ ವಿಭಾಗದಲ್ಲಿ ಶೇಕಡ 13.26ರಷ್ಟು ಹಣದುಬ್ಬರ ಕಂಡು ಬಂದಿದೆ.

ಹೈದರಾಬಾದ್‌ನ ಖಾದ್ಯ ತೈಲ ಸಂಸ್ಥೆಯು ಫ್ರೀಡಂ ಸನ್‌ಪ್ಲವರ್ ಎಣ್ಣೆಯ ಬೆಲೆಯಲ್ಲಿ ರೂಪಾಯಿ 15 ಕಡಿತ ಮಾಡಿದೆ. ಈ ವಾರದಲ್ಲಿ ಸನ್‌ಪ್ಲವರ್ ಎಣ್ಣೆಯ ಬೆಲೆಯಲ್ಲಿ ಮತ್ತೆ 20 ರೂಪಾಯಿ ಕಡಿತ ಆಗಲಿದೆ.


ದೇಶದಲ್ಲಿ ತಾಳೆ ಎಣ್ಣೆ ಆಮದು ಶೇಕಡ 10ರಷ್ಟು ಕುಸಿದಿದೆ. ಇಂಡೋನೇಷ್ಯಾ ಖಾದ್ಯ ತೈಲ ಆಮದಿನ ಮೇಲೆ ನಿಷೇಧ ಹೇರಿದ ಬಳಿಕ ಈ ಏರಿಕೆ ಆಗಿತ್ತು. ಕಳೆದ ಮೇ ತಿಂಗಳಿನಲ್ಲಿ 5,14,022 ಟನ್ ತಾಳೆ ಎಣ್ಣೆ ಆಮದು ಮಾಡಿದ್ದರೆ, ಏಪ್ರಿಲ್‌ನಲ್ಲಿ 5,72,508 ತಾಳೆ ಎಣ್ಣೆ ಆಮದು ಮಾಡಲಾಗಿತ್ತು.


ದೇಶವು ತಾಳೆ ಎಣ್ಣೆಗೆ ಹೆಚ್ಚಾಗಿ ಇಂಡೋನೇಷ್ಯಾ, ಮಲೇಷಿಯಾವನ್ನು ಅವಲಂಬಿಸಿದೆ. ದೇಶ ಪ್ರತಿ ವರ್ಷ ಸರಿಸುಮಾರು 13.5 ಮಿಲಿಯನ್ ಟನ್ ಖಾದ್ಯ ತೈಲ ಆಮದು ಮಾಡಿಕೊಳ್ಳುತ್ತದೆ. ಹಾಗೆಯೇ 8-8.5 ಮಿಲಿಯನ್ ಟನ್ ತಾಳೆ ಎಣ್ಣೆ ಆಮದು ಮಾಡುತ್ತಿದೆ. ಇಂಡೋನೇಷ್ಯಾವು ಮೇ 23ರಂದು ಆಮದು ನಿಷೇಧವನ್ನು ಹಿಂದಕ್ಕೆ ಪಡೆದಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article