-->
OP - Pixel Banner ad
Nelyadi :-ದಾನಧರ್ಮಗಳು ಯಾವುದೇ ಕಾರಣಕ್ಕೂ ವ್ಯರ್ಥವಾಗದು. ರಕ್ತದಾನ ಶಿಬಿರ ಉದ್ಘಾಟಿಸಿ ರೆ.ಫಾ.ಜೈಸನ್ ಸೈಮನ್ ಒ.ಐ.ಸಿ

Nelyadi :-ದಾನಧರ್ಮಗಳು ಯಾವುದೇ ಕಾರಣಕ್ಕೂ ವ್ಯರ್ಥವಾಗದು. ರಕ್ತದಾನ ಶಿಬಿರ ಉದ್ಘಾಟಿಸಿ ರೆ.ಫಾ.ಜೈಸನ್ ಸೈಮನ್ ಒ.ಐ.ಸಿ

ನೆಲ್ಯಾಡಿ

ನಾವು ಮಾಡಿದ ದಾನಧರ್ಮ ವ್ಯರ್ಥವಾಗದು,  ಇಹದಲ್ಲಿ ಜೀವ ಉಳಿಸಿದ ಸಂಭ್ರಮ ಪರದಲ್ಲಿ ಭಗವಂತನ ಅನುಗ್ರಹ ಸಿಗುತ್ತದೆ. ಯಾವ ಕಾರಣಕ್ಕೂ  ಭಯ ಬೇಡ ಎಂದು ಮಲಂಕರ ಕ್ಯಾಥೊಲಿಕ್ ಯೂಥ್ ಮೂಮೆಂಟ್ ಇದರ ರಿಜಿನಲ್ ಡೈರೆಕ್ಟರ್ ಫಾ.ಜೈಸನ್ ಸೈಮನ್ ಒ,ಐ,ಸಿ, ಹೇಳಿದರು.

ಅವರು ಇಂದು   ಮಲಂಕರ  ಕ್ಯಾತೋಲಿಕ್ ಯೂಥ್ ಮೂಮೆಂಟ್ ಕಡಬ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇವರಸಹಬಾಗಿತ್ವದಲ್ಲಿ  ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ 139ನೇ ಸೌಹಾರ್ದ ಸಾರ್ವಜನಿಕ ರಕ್ತದಾನ ಶಿಬಿರವನ್ನು ಜ್ಞಾನೋದಯ ಬೆಥನಿ ಪಿ.ಯು. ಕಾಲೇಜು ನೆಲ್ಯಾಡಿ ಪುತ್ತೂರು  ಇದರ ಸಭಾಂಗಣದಲ್ಲಿ ಉದ್ಘಾಟಿಸಿ ಮಾತಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮಲಂಕರ ಕ್ಯಾಥೊಲಿಕ್  ಯೂಥ್ ಮೂಮೆಂಟ್ ಇದರ ಅದ್ಯಕ್ಷರಾದ  ಬಿನ್ಸನ್ ಆರ್ ಕೆ ವಹಿಸಿ ಮಾತನಾಡಿ ಕೂಡಿಟ್ಟ ಸಂಪಾದನೆಯನ್ನು ದಾನ ಮಾಡಲು ಹಿಂದೆ ಮುಂದೆ ನೋಡುವಾಗ ಎಲ್ಲಿಯೂ ಬಚ್ಚಿಡದೇ ದೇಹದಲ್ಲಿ ಉತ್ಪಾದನೆಯಾಗುವ ರಕ್ತವನ್ನಾದರೂ ದಾನಮಾಡಿರಿ ಎಂದು  ಕರೆಯಿತ್ತರು. ವೇದಿಕೆಯಲ್ಲಿ ಜ್ಞಾನೋದಯ ಬೆಥನಿ ಪಿ,ಯು,ಕಾಲೇಜ್ ಪ್ರಾಂಶುಪಾಲರಾದ  ಫಾ. ತೋಮಸ್ ಬಿಜಿಲಿ ಒ,ಐ,ಸಿ,  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವ್ಯವಸ್ಥಾಪಕರಾದ ಪ್ರವೀಣ್, ಶಿಬಿರ ಸಂಯೋಜಕ ರಾದ ಇಂತಿಯಾಝ್ ಬಜಪೆ,ಶಿಕ್ಷಕಿ ರೋಷಿಣಿ, ವೈದ್ಯರಾದ ರಿತೇಶ್,ಮಲಂಕರ ಕ್ಯಾಥೋಲಿಕ್ ಯೂತ್ ಮೂಮೆಂಟ್ ಕೋಶಾಧಿಕಾರಿ ಶ್ಯಾಂಟೋ ಉಪಸ್ಥಿತರಿದ್ದರು,  ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಮಾದ್ಯಮ ವಿಭಾಗದ ಮುಖ್ಯಸ್ಥ ಅಬ್ದುಲ್ ಹಮೀದ್ ಗೋಳ್ತಮಜಲ್  ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242