ಬಂಟ್ವಾಳ: ಚೂರಿಯಿಂದ ಇರಿದು ಮಹಿಳೆಯ ಹತ್ಯೆ ಮಾಡಿದ ತಂಡ
Monday, June 27, 2022
ಬಂಟ್ವಾಳ: ಆಟೊರಿಕ್ಷಾವೊಂದರಲ್ಲಿ ಬಂದಿರುವ ತಂಡವೊಂದು ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ವಿಟ್ಲ ಸಮೀಪದ ಮಾಣಿ ನೇರಳಕಟ್ಟೆ ಎಂಬಲ್ಲಿ ಇಂದು ನಡೆದಿದೆ.
ಮಾಣಿ ಕಾಪಿಕಾಡು ನಿವಾಸಿ ಸದ್ಯ ಅನಂತಾಡಿ ದೇವಿ ನಗರದಲ್ಲಿ ವಾಸವಾಗಿರುವ ಶಕುಂತಲಾ (35) ಮೃತಪಟ್ಟ ಮಹಿಳೆ.
ಶಕುಂತಲಾ ತಮ್ಮ ದ್ವಿಚಕ್ರ ವಾಹನದಲ್ಲಿ ಪುತ್ತೂರಿನಿಂದ ಮಾಣಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಆಟೊರಿಕ್ಷಾದಲ್ಲಿ ಬಂದಿರುವ ತಂಡವೊಂದು ಆಕೆಯ ಮೇಲೆ ಚೂರಿಯಿಂದ ದಾಳಿ ನಡೆಸಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಿದೆ.