
ಸ್ಯಾಂಡಲ್ ವುಡ್ ಯುವ ನಟನ ಬರ್ಬರ ಹತ್ಯೆ: ಬಾಮೈದುನನಿಂದಲೇ ಕೃತ್ಯ ಶಂಕೆ
6/18/2022 03:42:00 AM
ಬೆಂಗಳೂರು: ಸ್ಯಾಂಡಲ್ ವುಡ್ ಯುವ ನಟ ಸತೀಶ್ ವಜ್ರ ಅವರನ್ನು ಶುಕ್ರವಾರ ರಾತ್ರಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ನಟನ ಬಾಮೈದನೇ ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ನಗರದ ಆರ್‌ಆರ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣಗೆರೆ ಎಂಬಲ್ಲಿನ ಅವರ ಮನೆಯಲ್ಲಿಯೇ ಹತ್ಯೆ ಮಾಡಲಾಗಿದೆ. ಇತ್ತೀಚೆಗೆ 'ಲಗೋರಿ' ಎಂಬ ಕಿರು ಚಿತ್ರದ ಮೂಲಕ ಸತೀಶ್ ಜನರ ಗಮನ ಸೆಳೆದಿದ್ದರು. ಮೂಲತಃ ಮದ್ದೂರು ಮೂಲದವರಾಗಿರುವ ಸತೀಶ್ ವಜ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಚಿರಪರಿಚಿತರಾಗಿದ್ದರು. 3 ತಿಂಗಳ ಹಿಂದೆಯಷ್ಟೆ ಸತೀಶ್ ವಜ್ರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸತೀಶ್ ವಜ್ರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಆರ್‌ಆರ್‌ನಗರ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.