-->
ತನ್ನನ್ನೇ ತಾನು ವಿವಾಹವಾಗಲಿದ್ದಾರಂತೆ ಈ ಯುವತಿ: ಬಳಿಕ ಗೋವಾದಲ್ಲಿ ಹನಿಮೂನ್ ಮಾಡುತ್ತಾರಂತೆ

ತನ್ನನ್ನೇ ತಾನು ವಿವಾಹವಾಗಲಿದ್ದಾರಂತೆ ಈ ಯುವತಿ: ಬಳಿಕ ಗೋವಾದಲ್ಲಿ ಹನಿಮೂನ್ ಮಾಡುತ್ತಾರಂತೆ

ವಡೋದರಾ: ಜಗತ್ತಿನಲ್ಲಿ ಎಂಥೆಂತಹ ಜನರಿರುತ್ತಾರೆ ಎಂದು ಹೇಳಲು ಅಸಾಧ್ಯ. ಅಂತಹ ಜನರಲ್ಲಿ ಈ ಯುವತಿಯೂ ಓರ್ವಳು. ಈಕೆಯ ಹೆಸರು ಕ್ಷಮಾ ಬಿಂದು(24).  ಈಕೆಗೆ ವಿವಾಹ ನಿಶ್ಚಯವಾಗಿದೆ. ಅದರಲ್ಲೇನು ವಿಶೇಷವೇನು ಎನ್ನುತ್ತೀರಾ. ವಿಶೇಷವಿದೆ, ಅದೇನೆಂದರೆ ಈಕೆ ಯಾವುದೇ ಪುರುಷ ವರನನ್ನು ಮದುವೆಯಾಗದೆ ತನ್ನನ್ನೇ ತಾನೇ ವಿವಾಹವಾಗುತ್ತಿದ್ದಾಳೆ. ಆದ್ದರಿಂದ ವರನೋರ್ವನನ್ನು ಬಿಟ್ಟು ಕಾರ್ಯಕ್ರಮಕ್ಕೆ ದಿನಾಂಕ, ಛತ್ರ ಎಲ್ಲವೂ ನಿಗದಿಯಾಗಿದೆ. 

ಈ ವಿಶಿಷ್ಟ ವಿವಾಹಕ್ಕೆ ಕ್ಷಮಾ ಬಿಂದುವಿನ ಪೋಷಕರು ಸಮ್ಮತಿಸಿದ್ದು, ಅವರೇ ಮುಂದೆ ನಿಂತು ಸಂಪ್ರದಾಯದ ಪ್ರಕಾರ ಜೂನ್ 11ರಂದು ನಡೆಯಲಿದೆ.‌ ಈ ಸ್ವಯಂ ವಿವಾಹ ಗುಜರಾತ್‌ ನಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಎನ್ನಲಾಗಿದೆ. ಕ್ಷಮಾ ಬಿಂದು ತನ್ನ ನಿರ್ಧಾರವನ್ನು 'ಸ್ವಯಂ-ಪ್ರೀತಿಯ ಕ್ರಿಯೆ' ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ನಾನು ಎಂದಿಗೂ ವಿವಾಹವಾಗಲು ಬಯಸಲಿಲ್ಲ. ಆದರೆ ನಾನು ವಧುವಾಗಲು ಬಯಸಿದ್ದೆ. ಹಾಗಾಗಿ ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸಿದ್ದೇನೆ'' ಎಂದು ಹೇಳಿದ್ದಾರೆ.

ಈ ಸ್ವಯಂ ವಿವಾಹದ ಬಗ್ಗೆ ತಾನು ಆನ್ ಲೈನ್ ನಲ್ಲಿ ಓದಿದ್ದೆ. ಆದರೆ ದೇಶದ ಎಲ್ಲಿಯೂ ಈ ರೀತಿ ವಿವಾಹ ನಡೆದಿಲ್ಲ. ಬಹುಶಃ ಸ್ವಯಂ ಪ್ರೀತಿಯ ಕುರಿತಾಗಿ ತಾನೇ ಒಂದು ಉದಾಹರಣೆಯಾಗುತ್ತೇನೆ. ನನ್ನ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದಾರೆ. ಎಲ್ಲಾ ವಿಧಿವಿಧಾನಗಳನ್ನು ಆಚರಿಸುತ್ತಾರೆ. ವಿವಾಹದ ಬಳಿಕ ಗೋವಾದಲ್ಲಿ ಎರಡು ವಾರಗಳ ಹನಿಮೂನ್‌ ನಡೆಸಲಿದ್ದೇನೆ ಎಂದು ಹೇಳುತ್ತಾರೆ ಕ್ಷಮಾ ಬಿಂದು.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article